'ವಾಗರ್ಥ ವಿಲಾಸ'ದಲ್ಲಿ ತಿರುಮಲೇಶರು ಯಕ್ಷಗಾನದ ಪ್ರಸಂಗಕರ್ತರ ಬಗ್ಗೆ ಮಾತನಾಡುತ್ತಾರೆ. ಅವರು ರಚಿಸಿದ ಯಕ್ಷಗಾನದ ಪದಗಳ ವೈಶಿಷ್ಟ್ಯದ ಬಗ್ಗೆ ವಿವರಿಸುತ್ತಾರೆ. ಅಲ್ಲಿಂದ ಕಾವ್ಯದ ಲಯ, ಛಂದಸ್ಸು, ಪ್ರಾಸಗಳ ಬಗ್ಗೆ ಹೇಳುತ್ತ ಶಾಸನಗಳು, ಜನಪದ ಹಾಡುಗಳು, ಗೋವಿನ ಹಾಡು, ಶರಣರ ವಚನಗಳು, ಯಕ್ಷಗಾನದ ಹಾಡುಗಳು,ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳು ಮತ್ತು ಗೋಪಾಲಕೃಷ್ಣ ಅಡಿಗರ ಇವದ ತನಕ ತಮ್ಮ ವೈಚಾರಿಕ ಹರಹನ್ನು ಹರಡುತ್ತಾರೆ. ಕನ್ನಡದ ಮನಸ್ಸು, ಕನ್ನಡದ ಪ್ರಜ್ಞೆ ಅಥವಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಿರುಮಲೇಶರಷ್ಟು ತಲೆಕೆಡಿಸಿಕೊಂಡ ಇನ್ನೊಬ್ಬರಿಲ್ಲ ಎಂಬುದನ್ನು ಕೃತಿ ಸಾರಿ ಹೇಳುತ್ತದೆ.
©2024 Book Brahma Private Limited.