ವೃತ್ತಿಯಲ್ಲಿ ವೈದ್ಯರಾಗಿ ಜನಪ್ರಿಯರಾಗಿರುವ ಎನ್.ಭಾಸ್ಕರ ಆಚಾರ್ಯರು 'ಆರ್ಚಿ' ಎಂಬ ಕಾವ್ಯನಾಮದಿಂದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಾಮಾಜಿಕ ಕಳಕಳಿಯ ಜನಪರ ಚಿಂತನೆಯ ಫಲವಾಗಿ ರೂಪುಗೊಂಡ ವಿಚಾರಗಳು, ಸ್ಥಿತಿಗತಿ ಪತ್ರಿಕೆಗಾಗಿ ಪುಟ್ಟ ಮಟ್ಟ ಬರಹಗಳಾಗಿ ಮೂಡಿ ಬಂದಿದ್ದು, ಅಂತಹ ಲೇಖನಗಳನ್ನು ’ಆರ್ಚಿ ಅಂಕಣ’ ಸಂಕಲನದಲ್ಲಿ ನೀಡಲಾಗಿದೆ.
ಸಾಮಾಜಿಕ ಆರೋಗ್ಯ, ಆಸ್ಪತ್ರೆಗಳ ವ್ಯವಸ್ಥೆ, ಸಮಕಾಲೀನ ಜಗತ್ತಿನ ಸಾಮಾಜಿಕ ಮೌಲ್ಯಗಳು, ಯುವ ಜನತೆಯ ಗೊಂದಲಗಳು, ಜನರ ಮನಸ್ಸನ್ನು ಬದಲಿಸಬಲ್ಲ ಜಾಹೀರಾತುಗಳು, ಕನ್ನಡ ಪ್ರಕಾಶನ ಉದ್ಯಮ, ಅಪರಾಧಿ ಮನೋವೃತ್ತಿ ಮುಂತಾದ ಸಂಗತಿಗಳನ್ನು ಹೊಸ ಆಲೋಚನಾ ಕ್ರಮದಿಂದ ವಿಶ್ಲೇಷಿಸಿ ಬರೆದಿರುವ ಲೇಖನಗಳು ಓದುಗರಿಗೆ ಹೊಸ ಒಳನೋಟಗಳನ್ನು ನೀಡುತ್ತವೆ.
©2025 Book Brahma Private Limited.