‘ಇದು ಜೀವನ ಇದು ಅಮೃತ’ ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪ ಅವರ ಹಿತಚಿಂತನೆ/ಸೂಕ್ತಿಗಳ ಕೃತಿ. ಪ್ರಪಂಚ ವಾರಪತ್ರಿಕೆಯಲ್ಲಿ ದಶಕಗಳ ಕಾಲ ಬರೆದ ಅನುಭವ ಅಂಕಣದ ಸಂಗ್ರಹ ರೂಪ ‘ಇದು ಜೀವನ ಇದು ಅಮೃತ.'
ಸನ್ಯಾಸಿ, ಬ್ರಹ್ಮಚರ್ಯ, ಸೌಂದರ್ಯ, ಸುದೈವ, ದುರ್ಗುಣ, ಸದ್ಗುಣ, ಪ್ರೇಮ- ಪ್ರೀತಿ , ನೀತಿ ನಡತೆ, ಗೆಳೆತನ, ತಂದೆ ತಾಯಿ, ಯೌವ್ವನ ಮುಪ್ಪು, ಕೆಲಸ, ರೈತ ಒಕ್ಕಲಿಗ, ಹವ್ಯಾಸ,... ಇಂತಹ ಅನೇಕ ವಿಷಯಗಳ ಕುರಿತು ಅನುಭವ, ಓದು, ಅವಲೋಕನದ ಆಧಾರದ ಮೇಲೆ ಸೂಕ್ತಿಗಳನ್ನು 'ಪಾಪು’ ರಚಿಸಿಕೊಟ್ಟಿದ್ದಾರೆ.
©2024 Book Brahma Private Limited.