ಸಲೀಂ ತೆಲುಗು ಭಾಷೆಯ ಸೂಕ್ಷ್ಮ ಸಂವೇದಿ ಲೇಖಕ. ಅವರು ತೆಲುಗಿನಲ್ಲಿ ಪ್ರಕಟಿಸಿದ 'ಅಪರಾಜಿತ' ಮಕ್ಕಳ ಕಾದಂಬರಿಯನ್ನು ಧನಪಾಲ ನಾಗರಾಜಪ್ಪ ಅವರು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಲಿಟಲ್” ಎಂಬ ನಾಯಿಮರಿಯಿಂದಲೇ ಕಥೆ ಪ್ರಾರಂಭಿಸುವುದು ಮಕ್ಕಳನ್ನು ಸೆಳೆಯಬಹುದಾದ ಹಂದರ. ರಜಿತ ಎನ್ನುವ ಪುಟ್ಟ ಬಾಲಕಿ ಮತ್ತು ಲಿಟಲ್ ಎಂಬ ನಾಯಿಯ ನಡುವಿನ ಸಂಬಂಧವನ್ನು ತಿಳಿಸುವ ಈ ಕಿರು ಕಾದಂಬರಿ ರೋಚಕತೆ, ಸಾಹಸ ಇತ್ಯಾದಿಯನ್ನು ಒಳಗೊಂಡಿದೆ. ಮರಿಯಾಗಿ ಮನೆಗೆ ಬರುವ ಲಿಟಲ್ ಆ ಕುಟುಂಬದ ಸಂಬಂಧಗಳನ್ನು, ದೃಷ್ಟಿಕೋನಗಳನ್ನು ಬದಲಿಸುತ್ತಲೇ ರಜಿತಾಳ ಎಲ್ಲ ಸಾಹಸ ಕಾರ್ಯಗಳಲ್ಲೂ ಭಾಗವಹಿಸಿ ಆಕೆ ಅತ್ಯುನ್ನತ ಪುರಸ್ಕಾರ ಪಡೆಯುವುದರಲ್ಲಿ ತನ್ನ ಪಾತ್ರವನ್ನು ನಿಭಾಯಿಸುತ್ತದೆ.
©2025 Book Brahma Private Limited.