ಹಾಲೆಂಡ್ ದೇಶದ ಬ್ಯಾರೆನ್ (ಪಾಳೆಯಗಾರ) ಮಂಛೌಸನ್ ಎಂಬಾತ ಕಥಾನಾಯಕನಾಗಿ ತನ್ನನ್ನು ತಾನು ಪರಿಚಯ ಮಾಡಿಕೊಳ್ಳುತ್ತಲೇ ಸಿಂಹ ಮೊಸಳೆಗಳ ಸಂಚಾರ, ತೋಳ ಕುದುರೆಯಾದದ್ದು, ನಾನೂ ಚಂದ್ರಲೋಕಕ್ಕೆ ಹೋಗಿದ್ದೆ, ನಾನೂ ಹಕ್ಕಿಯಂತೆ ಹಾಡಿದ್ದು, ನನ್ನ ಬೇಟೆ ನಾಯಿ, ಮಹಾಮತ್ಸ್ಯದ ಹೊಟ್ಟೆಯಲ್ಲಿ ಹೀಗೆ 15 ಆಕರ್ಷಕ ಅಧ್ಯಾಯಗಳ ಮೂಲಕ ತಮ್ಮ ಅನುಭವಗಳನ್ನು ದಾಖಲಿಸುತ್ತಾ ಹೋಗುವುದು ಈ ಕೃತಿಯ ಶೈಲಿ. ವಿಶೇಷ ವಾಗಿ ಮಕ್ಕಳಿಗೆ ಕುತೂಹಲ ಮೂಡಿಸುವುದು ಇದರ ಉದ್ದೇಶ. ಆಂಗ್ಲ ಮೂಲದ ಕಥೆಯನ್ನು ಜಿ.ಪಿ. ರಾಜರತ್ನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರತಿ ಅಧ್ಯಾಯವು ಆಕರ್ಷಕ ಚಿತ್ರಗಳಿಂದ ಗಮನ ಸೆಳೆಯುತ್ತದೆ.
©2025 Book Brahma Private Limited.