ರಸ್ಕಿನ್ ಬಾಂಡ್ ಭಾರತದ ಸುಪ್ರಸಿದ್ದ ಲೇಖಕರು. ತಮ್ಮ 17ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ’ದ ರೂವಕ್ ಆನ್ ದ ರೂಫ್’ಗೆ ರೈಸ್ ಸ್ಮಾರಕ ಪ್ರಶಸ್ತಿ ಲಭಿಸಿದೆ. ರಸ್ಕಿನ್ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟ ಕೃತಿ ’ಅಡ್ವೆಂಚರ್ಸ್ ಆಫ್ ರಸ್ಟಿ’. ಬಾಲ್ಯದ ಅನುಭವಗಳೇ ರಸ್ಟಿ ಪಾತ್ರ ಸೃಷ್ಟಿಯಾಗಲು ಕಾರಣ ಎಂದು ಅವರು ಒಂದೆಡೆ ಹೇಳಿಕೊಂಡಿದ್ದಾರೆ.
ಕೃತಿಯ ಕನ್ನಡ ಅನುವಾದ ’ರಸ್ಟಿಯ ಸಾಹಸಗಳು’. ಮಕ್ಕಳನ್ನು ರಂಜಿಸುವಂತಹ, ಚಿಣ್ಣರ ಕಲ್ಪನೆಯ ಎಲ್ಲೆಯನ್ನು ಹಿಗ್ಗಿಸುವಂತಹ ಕತೆಗಳನ್ನು ನೀಡಿರುವ ರಸ್ಕಿನ್ ಬಾಂಡ್ ಇಲ್ಲಿ ರಸ್ಟಿ ಮೂಲಕ ಫ್ಯಾಂಟಸಿ ಲೋಕವನ್ನೂ, ವಾಸ್ತವ ಜಗತ್ತನ್ನೂ ತೂಗಿದ್ದಾರೆ. ಅಹಲ್ಯ ಚಿಂತಾಮಣಿಯವರು ಆಪ್ತ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.