ಮಹಾಭಾರತ ಕಾವ್ಯದಲ್ಲಿ ಶ್ರೀಕೃಷ್ಣನ ಲೀಲೆಗಳ ಸನ್ನಿವೇಶವೇ ಅದ್ಭುತ. ಶ್ರೀಕೃಷ್ಣನ ಬಾಲ್ಯ, ಗೋಪಿಕಾ ಸ್ತ್ರೀಯರೊಂದಿಗೆ ಆತನ ತುಂಟಾಟ, ಎಳೆಯತನದಲ್ಲೇ ಆತ ತೋರಿದ ಅಸಾಧಾರಣ ಸಾಮರ್ಥ್ಯ, ದೈವತ್ವದ ಅಂಶಗಳು, ಸಾಹಸಮಯ ಸನ್ನಿವೇಶಗಳು, ಈ ಕುರಿತ ಕಥಾನಕಗಳು ಇತ್ಯಾದಿ ಮಕ್ಕಳಿಗೆ ಕುತೂಹಲ ಕೆರಳಿಸುತ್ತವೆ. ಮಾತ್ರವಲ್ಲ; ದೊಡ್ಡವರಿಗೆ ಜೀವನ ಸಂದೇಶವೂ ನೀಡುತ್ತವೆ. ಲೇಖಕ ಐಜೆನ್ ಬಿ. ಅವರು ಇಂಗ್ಲೀಷಿನಲ್ಲಿ ಬರೆದ ಕೃತಿಯನ್ನು ಗೋಪಾಲಕೃಷ್ಣ ಮಧ್ಯಸ್ಥ (ಜಿ.ಕೆ.ಮಧ್ಯಸ್ಥ) ಅವರು ಕನ್ನಡಕ್ಕೆ ಅನುವಾದಿಸಿದ್ದು, ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವಂತೆ ಸರಳ ಭಾಷೆಯೊಂದಿಗೆ ಹಾಗೂ ಸೂಕ್ತ ಚಿತ್ರಗಳೊಂದಿಗೆ ಈ ಕೃತಿಯು ಗಮನ ಸೆಳೆಯುತ್ತದೆ.
©2024 Book Brahma Private Limited.