ಪ್ರಸ್ತುತ ಕೃತಿ ವತ್ಸಲಾ ಆರ್ ಶೆಣೈ ಅವರ ಕೊಂಕಣಿ ಭಾಷೆಯ ‘ಹೊಳ್ಳಮ್ಮಾಲೊ ಕಾಣ್ಹಿಯಾಂಚೊ ಪೆಠಾರೊ’ ಮಕ್ಕಳ ಕಥಾ ಸಂಗ್ರಹದ ಕನ್ನಡ ಅನುವಾದವಾಗಿದೆ. ಇಲ್ಲಿ ಮೂರು ಭಾಗಗಳಲ್ಲಿ (ಸಣ್ಣ ಕಥೆಗಳು, ಶಾಂತಿವನದ ಕಥೆಗಳು ಮತ್ತು ಆಯ್ದ ಜಾನಪದ ಕಥೆಗಳು) ವರ್ಗೀಕರಿಸಲಾದ ಒಟ್ಟು 30 ಕಥೆಗಳಿವೆ. ಮಕ್ಕಳ ಮನೋವಿಕಾಸವನ್ನು ಗಮನದಲ್ಲಿಟ್ಟು ಈ ಕಥೆಗಳ ನಿರೂಪಣೆಯಲ್ಲಿ ಲೇಖಕಿ ವ್ಯಕ್ತಪಡಿಸಿದ ಕಾಳಜಿ ಮತ್ತು ಎಚ್ಚರ ಎದ್ದು ಕಾಣುತ್ತದೆ.
ಇಲ್ಲಿ ಮೂಕ ಪ್ರಾಣಿಗಳು ಜೀವಂತ ಪಾತ್ರಗಳಾಗಿ ನಮ್ಮ ಕಣ್ಣ ಮುಂದೆ ಓಡಾಡುತ್ತವೆ. ಸಹಜೀವನದ ಉದಾತ್ತ ಪ್ರಜ್ಞೆಯನ್ನು ಕೇಂದ್ರವಾಗಿಟ್ಟುಕೊಂಡು ಆಪತ್ಕಾಲದಲ್ಲಿ ಕಷ್ಟದಲ್ಲಿ ಇರುವವರ ನೆರವಿಗೆ ಧಾವಿಸುವ, ಅತಿಕ್ರಮಣ ನಡೆಸುವವರಿಗೆ ಶಿಕ್ಷೆ ವಿಧಿಸುವ ಪ್ರಾಣಿಜಗತ್ತಿನ ಅಪರೂಪದ ಪ್ರಸಂಗಗಳು ಅಚ್ಚರಿಯನ್ನು ಉಂಟು ಮಾಡುತ್ತವೆ. ಮಕ್ಕಳು ಮಾತ್ರವಲ್ಲ, ಹಿರಿಯರು ಕೂಡ ಇಷ್ಟಪಡುವಂತಹ ಕತೆಗಳು ಇಲ್ಲಿವೆ. ನರಿ, ಹದ್ದು, ಹೆಬ್ಬಾವು, ಮೊಸಳೆ, ಹುಲಿ, ಕತ್ತೆ, ಹಂಸಪಕ್ಷಿ, ಮಂಗ ಹೀಗೆ ಅರಣ್ಯಜಗತ್ತಿನ ಪ್ರಾಣಿಪಕ್ಷಿಗಳನ್ನು ಮಕ್ಕಳಿಗೆ ಉತ್ತಮ ರೀತಿಯಿಂದ ಪರಿಚಯಿಸುವ ಕಾರ್ಯವನ್ನು ಕೂಡ ಈ ಕಥೆಗಳು ಮಾಡುತ್ತವೆ.
©2024 Book Brahma Private Limited.