About the Author

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು.

ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿವರ್ಷ' ಅವ್ವ 'ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.  ಕಲಬುರ್ಗಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿ, ಭಾರತ್ ಭಾರತೀಯ ರೆಡ್ ಕ್ರಾಸ್ ಕಲಬುರ್ಗಿ ಜಿಲ್ಲಾ ಘಟಕದ ಆಡಳಿತ ಮಂಡಳಿಯ ಸದಸ್ಯರಾಗಿ, ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ನಿರ್ದೇಶಕರಾಗಿ, ಕಮಲಾಪುರ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಕಮಲಾಪುರ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಯನಿರ್ವಹಿಸುತ್ತಿದ್ದಾರೆ. ವಿಚಾರಸಂಕಿರಣಗಳಲ್ಲಿ, ಸಮ್ಮೇಳನಗಳಲ್ಲಿ, ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪ್ರಸ್ತುತ, ಟಿ. ಎನ್ ಆರ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಅವ್ವ (‘ತಾಯಿ’ ವಿಷಯ ಕೇಂದ್ರಿತ ಕವನ ಸಂಕಲನ-ಸಂಪಾದನೆ ), ಮಹಾತ್ಮ ಗಾಂಧೀಜಿ (ಜೀವನ ಚರಿತ್ರೆ ) ಅಪರೂಪದ ಸಂಗತಿಗಳು (ಸಂಶೋಧನ ಬರಹಗಳು ), ಅಂಬಿಗರ ಚೌಡಯ್ಯ (ಜೀವನ ಚರಿತ್ರೆ ಹಾಗೂ ವಚನಗಳು ), ಭಕ್ತ ಕನಕದಾಸ(ಜೀವನ ಚರಿತ್ರೆ ಹಾಗೂ ಕೀರ್ತನೆಗಳು ), ಹಡೆದವ್ವ (ಲೇಖನ ಸಂಗ್ರಹ -ಸಂಪಾದನೆ ), ಸರ್ವಜ್ಞ(ಜೀವನ ಚರಿತ್ರೆ ಹಾಗೂ ತ್ರಿಪದಿಗಳು ), ಅನಿಕೇತನ (ಲೇಖನ ಸಂಗ್ರಹ -ಸಂಪಾದನೆ ), ಪ್ರಪಂಚದ ಪ್ರತಿಷ್ಠಿತ ವಿಜ್ಞಾನಿಗಳು (ಸಂಕ್ಷಿಪ್ತ ಚರಿತ್ರೆ ), ಬದುಕು ಬದಲಾಗಬೆಕು (ಚುಟುಕು ಸಂಕಲನ ), ಜ್ಞಾನ ಸಿರಿ (ಲೇಖನಗಳ ಸಂಗ್ರಹ -ಸಂಪಾದನೆ ), ಜ್ಞಾನ ಸಿಂಚನ (ಲೇಖನಗಳ ಸಂಗ್ರಹ -ಸಂಪಾದನೆ) , ಕವಿಕಾವ್ಯ ದರ್ಪಣ (ಕವಿಗಳ ಸಂಕ್ಷಿಪ್ತ ಚರಿತ್ರೆ ), ಅಜಾತ ಶತ್ರು (ಅಭಿನಂದನ ಗ್ರಂಥ -ಸಂಪಾದನೆ)

ಪ್ರಶಸ್ತಿ-ಪುರಸ್ಕಾರಗಳು: ಹಲವಾರು ಸಂಘ ಸಂಸ್ಥೆಗಳು ಬಸವಚೇತನ ಪ್ರಶಸ್ತಿ, ಕನ್ನಡ ಕಲ್ಪತರು ಪ್ರಶಸ್ತಿ,ಕನ್ನಡಸಿರಿ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ, ದೇವನಾಂಪ್ರಿಯ ಪ್ರಶಸ್ತಿ,ರಾಷ್ಟ್ರ ಮಟ್ಟದ ಉತ್ತಮ ಸಂಘಟನೆ ಉಪನ್ಯಾಸಕ ಪ್ರಶಸ್ತಿ,ರಾಜ್ಯಮಟ್ಟದ ಉತ್ತಮ ಸಂಘಟನಾ ಉಪನ್ಯಾಸಕ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ಲಭಿಸಿದೆ.

 

ಶರಣಬಸಪ್ಪ ವಡ್ಡನಕೇರಿ

(22 May 1980)