ಡಾ. ಸಂಗಮೇಶ ಸವದತ್ತಿಮಠ ಅವರು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕ ಮುರಗೋಡದಲ್ಲಿ ಜನಿಸಿದ್ದಾರೆ. ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧಡೆ ಅಭ್ಯಾಸ ಮಾಡಿ ಕರ್ನಾಟಕ ವಿ.ವಿ.ಯಲ್ಲಿ ಕನ್ನಡ ಮತ್ತು ಭಾಷಾವಿಜ್ಞಾನದಲ್ಲಿ ಎಂ.ಎ. ನಂತರ ಭಾಷಾವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1965 ರಿಂದ 68ರ ವರೆಗೆ ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ 1970 ರಿಂದ 72 ರವರೆಗೆ ನರಗುಂದ ಕಾಲೇಜಿನಲ್ಲಿ ಅಧ್ಯಾಪಕರು, ನಂತರ ವಿ.ವಿ.ಯಲ್ಲಿ ಕಲಾನಿಕಾಯದ ಡೀನ್ ಹಾಗೂ ವಿಶೇಷಾಧಿಕಾರಿಯಾಗಿ ನಿವೃತ್ತರಾದರು.
ಭಾಷಾವಿಜ್ಞಾನ, ಸಂಶೋಧನೆ, ಸಂಪಾದನೆ ಜಾನಪದ, ವಿಮರ್ಶೆ ಹಾಗೂ ಸೃಜನಶೀಲಕ್ಕೆ ಸಂಬಂಧಿಸಿದ ಒಟ್ಟು130 ಕೃತಿಗಳನ್ನು ರಚಿಸಿದ್ದಾರೆ. ಇವರ ಹೆಸರಿನಲ್ಲಿಯೇ ಒಂದು ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಸಾಹಿತ್ಯ ಸಂಶೋಧನ ಮಾರ್ಗ. ಇವರ ಪ್ರಕಟಿತ ಕೃತಿಗಳಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯ ಇತಿಹಾಸ ಸಂಶೋಧನ ಪ್ರಬಂಧಸೂಚಿ, ಅಭಿನವ ಪಾಶುಪತ-ವೀರಶೈವ-ಲಿಂಗಾಯತ ಮುಂತಾದ ಸಂಶೋಧನ ಕೃತಿಗಳು ವಿಶಿಷ್ಟವಾದವು.
ಕಳೆದ 15 ವರ್ಷಗಳಿಂದ ಸಂಶೋಧನ ವ್ಯಾಸಂಗ ಪತ್ರಿಕೆ ಪ್ರಕಟಿಸುತ್ತಿದ್ದಾರೆ. ವಿಶ್ವಕೋಶಗಳಲ್ಲಿ, ಸಂಕಲನಗಳಲ್ಲಿ ಇವರ ಲೇಖನಗಳು ಸೇರಿವೆ. ಇವರಿಗೆ ‘ಭಾಷಾ ಸಂಗಮ’ ಅಭಿನಂದನ ಗ್ರಂಥ ಅರ್ಪಿಸಲಾಗಿದೆ.
ಭಾಷಾ ವಿಜ್ಞಾನ ; ದ್ರಾವಿಡ ಭಾಷೆಗಳು, ಜನಪದ ಭಾಷಾ ಸಮೀಕ್ಷೆ ಕನ್ನಡ ನಾಟಕಗಳಲ್ಲಿ ಭಾಷೆ, ಆರ್ಯಭಾಷಾ ವ್ಯಾಸಂಗ ಸಂಶೋಧನೆ-ಕನ್ನಡ ಸಂಶೋಧನ ಕೈಪಿಡಿ, ವೀರಶೈವ ವಿನ್ಯಾಸ, ಶೂನ್ಯಸಂಪಾದನೆಯ ಮುಖಗಳು ಕನ್ನಡ ಸಂಶೋಧನೆಯ ಇತಿಹಾಸ, ಜಾನಪದ: ಪ್ರಭುದೇವರ ಯಕ್ಷಗಾನ, ಕಾದಂಬರಿ : ಚಿನ್ನ ಚಿನ್ಮಯಿ ನಾಟಕ-ನೇಗಿಲಯೋಗಿ ಚಿಂತನ- ಸನ್ನಿಧಿ ಪ್ರಬಂಧ : ಕಂದರಗಳು ಹಾಗೂ ಸಂಬಂಧಗಳು, ಆದಯ್ಯ ಸಂಪಾದನೆ- ಬಯಲು, ಮುಕ್ತಿಮಾರ್ಗ, ಕಾವ್ಯಸುಮ, ಕಾಯಕಯೋಗಿ, ಆಚಾರ್ಯ.
ಲಭಿಸಿದ ಪ್ರಶಸ್ತಿಗಳು: 1976 -ದ್ರಾವಿಡ ಭಾಷಾವ್ಯಾಸಂಗ ಕೃತಿಗೆ ಕನ್ನಡ ಸಂಸ್ಕೃತಿ ಇಲಾಖೆ ಪುರಸ್ಕಾರ. 1983-ಪ್ರಭುದೇವರ ಯಕ್ಷಗಾನ ಕೃತಿಗೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪುರಸ್ಕಾರ, 1986-ಶೆಟವಿ ಕೃತಿಗೆ ಗುಲಬರ್ಗ ವಿ.ವಿ. ಪುರಸ್ಕಾರ 1986-ಸಾಹಿತ್ಯ ಸಂಶೋಧನ ಮಾರ್ಗ ಕೃತಿಗೆ ಮೂರು ಸಾವಿರ ಮಠದ ಪ್ರಶಸ್ತಿ. 1999- ಭಾಷಾಲೇಖಾ ಕೃತಿಗೆ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಇಲಾಖೆ ಇತ್ಯಾದಿ.