ಮಣಿಪಾಲ್ ಮೀಡಿಯಾ ಎಂಟರ್ಟೈನ್ಮೆಂಟ್ ನೆಟ್ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ.
ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ಸಂವಾದ ಮಾಲೆ), ಭಜಗೋವಿಂದಮ್, ಮಕ್ಕಳ ಕಥಾ ಮಾಲಿಕೆ-38 (ಮಕ್ಕಳ ಸಾಹಿತ್ಯ) ಪ್ರಕಟಿತ ಕೃತಿಗಳು.
ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ (2006), ಸಾರ್ವಜನಿಕ ಸಂಪರ್ಕ ವ್ಯಕ್ತಿ ಪ್ರಶಸ್ತಿ(2004), ಎಚ್.ಕೆ.ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ(2008), 'ಸಾಧನಾ' ಪ್ರಶಸ್ತಿ (ಶ್ರವಣಬೆಳಗೊಳ), ಶ್ರೀಮಾತಾ ಪ್ರಶಸ್ತಿ (2007)ಗಳು ಸಂದಿವೆ.