ವಿವಾಹ ಮತ್ತು ವರದಕ್ಷಿಣೆ

Author : ಶ್ರೀದೇವಿ ಎಲ್ ರಾಠೋಡ

Pages 104

₹ 70.00




Year of Publication: 2015
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು,
Address: ಮುಖ್ಯಬೀದಿ, ಸೂಪರ್ ಮಾರ್ಕೆಟ್, ಕಲಬುರಗಿ-585101
Phone: 9448124431

Synopsys

‘ವಿವಾಹ ಮತ್ತು ವರದಕ್ಷಿಣೆ’ ಕೃತಿಯು ಡಾ. ಶ್ರೀದೇವಿ ಎಲ್. ರಾಠೋಡ ಅವರು ಬರೆದ ಬುಡಕಟ್ಟು ಅಧ್ಯಯನ-ಸಮುದಾಯ ಆಚರಣೆಗಳ ಕೃತಿ. ಕುಂಚಿ ಕೊರವ ಮತ್ತು ಬಂಜಾರ ವಿಮುಕ್ತ ಬುಡಕಟ್ಟು ಸಮುದಾಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವು. ಈ ಸಮುದಾಯಗಳಲ್ಲಿ ವಿವಾಹ ಪದ್ಧತಿಯ ಆಚರಣೆಗಳ ಕುರಿತು ಅಧ್ಯಯನ ಮತ್ತು ವರದಕ್ಷಿಣೆ ಪದ್ಧತಿಗೆ ಮಹಿಳೆಯರು ಹೇಗೆ ನಲುಗಿದ್ದಾರೆ. ತೆರ ಪದ್ಧತಿ ಇರುವ ಈ ಸಮುದಾಯದಲ್ಲಿ ಆಧುನಿಕತೆಯ ಪ್ರಭಾವದಿಂದ ವರದಕ್ಷಿಣೆ ಪದ್ಧತಿ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ಒಳನೋಟಗಳಿರುವ ಮಹಿಳಾ ಅಧ್ಯಯನದ ಬರಹಗಳಿವೆ. 

 

About the Author

ಶ್ರೀದೇವಿ ಎಲ್ ರಾಠೋಡ
(28 February 1983)

ಡಾ. ಶ್ರೀದೇವಿ ಎಲ್ ರಾಠೋಡ  ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ.  ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ.  ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ  ಆಹಾರ  ಪದ್ಧತಿ, ಚಿಂದಿ  ಆಯುವ ಮಹಿಳೆ ಮತ್ತು ...

READ MORE

Related Books