ಲೇಖಕ ಡಾ. ಎಸ್.ಎಂ. ಮುತ್ತಯ್ಯ ಅವರ ಕೃತಿ-ಕಂಪಳ. ಮ್ಯಾಸಬೇಡರ ಸಂಸ್ಕೃತಿಯ ಅಧ್ಯಯನ ಒಳಗೊಂಡ ಕೃತಿ. ಬುಡಕಟ್ಟು ಜನಾಂಗಗಳ ಪೈಕಿ ಮ್ಯಾಸಬೇಡರು ಸಹ ಬುಡಕಟ್ಟಿನವರಾಗಿದ್ದು, ಅವರ ಜೀವನ ಸಂಸ್ಕೃತಿ, ವ್ಯಾವಹಾರಿಕ ನಡೆಗಳು, ಆಚಾರ-ವಿಚಾರಗಳು, ಸಾಮಾಜಿಕ ನಡೆಗಳು ಇತ್ಯಾದಿ ಕುರಿತು ಸಂಶೋಧನಾತ್ಮಕ ನೆಲೆಯಲ್ಲಿ ಅಧ್ಯಯನ ನಡೆಸಿದ ಕೃತಿ. ಮ್ಯಾಸಬೇಡರು ಮತ್ತು ನಾಯಕರು, ಸಾಂಸ್ಕೃತಿಕ ಮಹತ್ವದ ಮ್ಯಾಸಮಂಡಲ, ದೇವರ ಎತ್ತಿನ ಕಿರಿಗಳು, ಮ್ಯಾಸ ನಾಯಕರ ಜನಪದ ಸಾಹಿತ್ಯ: ಒಂದು ಚಾರಿತ್ರಿಕ ನೋಟ, ಮ್ಯಾಸ ನಾಯಕರ ದೇವರ ಪದಗಳು, ಮ್ಯಾಸ ನಾಯಕರ ಪಾರಂಪರಿಕ ಕೃಷಿ ಪದ್ಧತಿ ಹೀಗೆ ಒಟ್ಟು 17 ಅಧ್ಯಾಯಗಳನ್ನು ಒಳಗೊಂಡಿದೆ.
©2024 Book Brahma Private Limited.