’ಅಸುರ’ ಲೇಖಕ ನಾಗ ಹೆಚ್ ಹುಬ್ಳಿ ಅವರ ಆದಿವಾಸಿ ಸಮುದಾಯದ ಇಲ್ಲವೇ ಜನಾಂಗೀಯ ಅಧ್ಯಯನ ಕೃತಿ. ಆದಿಮ ಸಂಸ್ಕೃತಿಯ ವಾರಸುದಾರರಾದ ” ಅಸುರ ಸಮುದಾಯ” ಒಳಹೊಕ್ಕು ಆದಿವಾಸಿ ಜನಾಂಗದ ಮೂಲಬೇರುಗಳನ್ನು ಹಾಗೂ ಬದುಕನ್ನು ವಿವರಿಸುತ್ತದೆ. 'ಅಸುರ' ಎಂಬ ಆದಿವಾಸಿ ಸಮುದಾಯವು ಝಾರ್ಖಂಡ್ ರಾಜ್ಯದ 22 ಆದಿವಾಸಿ ಸಮುದಾಯಗಳಲ್ಲಿ ಒಂದು. ಈ ಸಮುದಾಯದ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ಅತ್ಯಂತ ಕುತೂಹಲದಿಂದ ಲೇಖಕರು ವಿಶ್ಲೇಷಿಸಿದ್ದಾರೆ. ಬಹುತೇಕ ಆದಿವಾಸಿಗಳಲ್ಲಿ ಅನಕ್ಷರತೆ, ಬಡತನಗಳ ಜೊತೆಗೆ ಐತಿಹಾಸಿಕ ಪ್ರಜ್ಞೆಯ ಕೊರತೆಯನ್ನೂ ಕಾಣುತ್ತೇವೆ. ಈ ಸಂಗತಿಗಳು ಇವರ ಅನಾಗರಿಕತೆಯನ್ನು ಪ್ರತಿನಿಧಿಸಿದರೂ, ಆದಿಮ ಸಂಸ್ಕೃತಿಯ ರಕ್ಷಕರಾಗಿ 'ಅಸುರ' ಸಮುದಾಯದ ಕೊಡುಗೆ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಬೆಲೆ ಪಡೆದುಕೊಳ್ಳುತ್ತದೆ. ಅಸುರರ ಕುರಿತು ಅರಿಯುವ ಮನಸ್ಸು ರೂಪಿಸಿಕೊಂಡವರಿಗೆ ಇದೊಂದು ಉಪಯುಕ್ತ ಕೃತಿಯಾಗಿದೆ.
©2024 Book Brahma Private Limited.