ನಾಯಕನಹಟ್ಟಿ ಪಾಳೆಯಗಾರರು

Author : ಮೀರಾಸಾಬಿಹಳ್ಳಿ ಶಿವಣ್ಣ

Pages 212

₹ 250.00




Year of Publication: 2020
Published by: ಸಿವಿಜಿ ಪಬ್ಲಿಕೇಷನ್ಸ್,
Address: # 277, 5ನೇ ಅಡ್ಡರಸ್ತೆ, ಅಡ್ಡರಸ್ತೆ, ವಿಧಾನಸೌಧ ವಿಸ್ರರಣೆ, ಲಗ್ಗೆರೆ, ಬೆಂಗಳೂರು-560058

Synopsys

ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಕೃತಿ-ನಾಯನಕಹಟ್ಟಿ ಪಾಳೆಯಗಾರರು. ಇತಿಹಾಸ ಮತ್ತು ಜಾನಪದ ಕೇಂದ್ರಿತ ಕೃತಿ ಇದು. ಚಿತ್ರದುರ್ಗ ಇತಿಹಾಸದ ಭಾಗವಾದ ನಾಯಕನಹಟ್ಟಿ ಪಾಳೆಯಗಾರರ ದಾಖಲೆಗಳ ಮಾಹಿತಿ ಒಳಗೊಂಡಿದೆ. ಪಶುಪಾಲಕ ಬುಡಕಟ್ಟು ಜನಾಂಗವೊಂದು ಕಟ್ಟಿದ ಇತಿಹಾಸ ಕಥನದ ರೂಪವಿದು. ನಾಯಕನಹಟ್ಟಿಯ ಬುಡಕಟ್ಟು ಸಾಂಸ್ಕೃತಿಕವೀರ ' ತಿಪ್ಪೇಸ್ವಾಮಿ ' ಕುರಿತಂತೆ ಹೊಸ ತಿಳಿವಳಿಕೆಯ ನೋಟಗಳು ಸಹ ಕೃತಿಯಲ್ಲಿ ಒಳಗೊಂಡಿದೆ.

 

About the Author

ಮೀರಾಸಾಬಿಹಳ್ಳಿ ಶಿವಣ್ಣ

ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ  ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...

READ MORE

Related Books