ಎನ್. ಹುಚ್ಚಪ್ಪ ಮಾಸ್ತರ ಅವರು ಕರ್ನಾಟಕದ ಜಾನಪದ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಬಹುದೊಡ್ಡ ಹೆಸರು. ದಶಕಗಳ ಕಾಲ ತಮ್ಮನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಅವಿಶ್ರಾಂತವಾಗಿ ದುಡಿದವರು. ನಾಡಿನಾದ್ಯಂತ ಮಾತ್ರವಲ್ಲದೇ ದೇಶದ ಬೇರೆ ಬೇರೆ ಕಡೆಗಳಲ್ಲಿಯೂ ನಮ್ಮ ಜಾನಪದ ಕಲೆ. ಸಂಸ್ಕೃತಿಗಳನ್ನು ಕೊಂಡೊಯ್ದು ಪರಿಚಯಿಸಿದವರು. ಮಾಸ್ತರರಾಗಿ, ಗಾಯಕರಾಗಿ, ಸಂಘಟಕರಾಗಿ-ಕನ್ನಡದ ಸಾಂಸ್ಕೃತಿಕ ಚರಿತ್ರೆಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಮಾಸ್ತರರು ಮಲೆನಾಡಿನ ಹಲವಾರು ಬುಡಕಟ್ಟು ಜನಾಂಗಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಕುರಿತಾಗಿ ಸೂಕ್ಷ್ಮ ಅಧ್ಯಯನ ಮಾಡಿದ್ದಾರೆ. ಆ ಎಲ್ಲಾ ಲೇಖನಗಳು ಬೇರೆ ಬೇರೆ ಕಡೆ ಚದುರಿಹೋಗಿವೆ. ಅವುಗಳನ್ನೆಲ್ಲಾ ಕನ್ನಡದ ಓದುಗರಿಗೆ ಒಟ್ಟಿಗೆ ಸಿಗುವ ಹಾಗೆ 'ಗೊಂಡರು ಮತ್ತು ಇತರ ಲೇಖನಗಳು' ಎಂಬ ಶೀರ್ಷಿಕೆಯಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.
©2024 Book Brahma Private Limited.