ಡಾ. ನಾಗಭೂಷಣ ಬಗ್ಗನಡು ಅವರ ಸಂಶೋಧನಾತ್ಮಕ ಕೃತಿ-ಸುಡುಗಾಡು ಸಿದ್ಧ ಸಮುದಾಯ. ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ತೀರಾ ಕೆಳಗೆ ತಳ್ಳಲ್ಪಟ್ಟ ಈ ಸಮುದಾಯದ ಕುಲಶಾಸ್ತ್ರೀಯ ಮತ್ತು ಸಾಂಸ್ಕೃತಿಕ ವಿವರಣೆಗಳಿವೆ. ಸುಡುಗಾಡು ಸಿದ್ಧರ ಸೃಷ್ಟಿ-ಕುಲ ಪುರಾಣಗಳು ಕುಲ ನ್ಯಾಯ ಪದ್ದತಿ, ಮದುವೆ, ದೈವಾರಾಧನೆ, ಜೀವನ ವಿಧಾನ, ಕುಲ ಕಸುಬುಗಳನ್ನುಇಲ್ಲಿ ದಾಖಲಾಗಿವೆ.
ಸಿದ್ಧ ಸಮುದಾಯದ ಜಿಲ್ಲಾವಾರು ಜನಸಂಖ್ಯೆ, ಲಿಂಗಾನುಪಾತ, ಸಮುದಾಯದ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳು, ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ವರದಿಗಳು ಒಳಗೊಂಡಿವೆ. ಭಾರತೀಯ ಸಮಾಜದ ಯಾವುದೇ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ-ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಕೃತಿಯು ಉತ್ತಮ ಆಕರ ಗ್ರಂಥ.
©2024 Book Brahma Private Limited.