ಡಾ. ನಾಗ ಎಚ್. ಹುಬ್ಳಿ ಅವರ‘ಝಾರ್ಖಂಡ್ ಆದಿವಾಸಿ ಬದುಕು’ ಕೃತಿಗೆ ಡಾ.ಕೆ.ಮರುಳಸಿದ್ದಪ್ಪ ಅವರ ಬೆನ್ನುಡಿ ಬರಹವಿದೆ: ಸುಮಾರು ಮೂರು ಕೋಟಿ ಇಪ್ಪತ್ತು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಝಾರ್ಖಂಡ್ ರಾಜ್ಯದಲ್ಲಿ ಸುಮಾರು 90 ಲಕ್ಷದಷ್ಟು ಆದಿವಾಸಿಗಳಿದ್ದಾರೆ. ಅವರದೇ ಭಾಷೆ, ಆಚರಣೆ, ಸಂಪ್ರದಾಯ ಜೀವನ ಶೈಲಿಯನ್ನು ಹೊಂದಿರುವ ಆದಿವಾಸಿಗಳು, ಸಾಮುದಾಯಿಕ ಬದುಕಿಗೆ ಮಾದರಿಯಾಗಬಲ್ಲರು. ಈ ಬುಡಕಟ್ಟು ಜನಾಂಗವು ಝಾರ್ಖಂಡ ಭಾಷೆಯನ್ನಾಡುತ್ತಿದ್ದು, ಸುಮಾರು ನಾಲೈದು ಉಪಭಾಷೆಗಳೂ ಇವರಲ್ಲಿ ಇವೆ; ಅವರ ಬದುಕು, ಹೋರಾಟ ಮತ್ತು ಸಂಸ್ಕೃತಿಯ ಸ್ವರೂಪವನ್ನು ಶ್ರೀ ನಾಗ ಎಚ್. ಹುಬ್ಳಿಯವರು ಈ ಕೃತಿಯಲ್ಲಿ ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಮಾನವಶಾಸ್ತ್ರಜ್ಞರಿಗೆ, ಅಧ್ಯಾಪಕರಿಗೆ, ಜಾನಪದತಜ್ಞರಿಗೆ, ವಿದ್ಯಾರ್ಥಿಗಳಿಗೆ ಈ ಪುಸ್ತಕವು ತುಂಬಾ ಉಪಯುಕ್ತವಾಗುತ್ತದೆ ಎಂಬುವುದನ್ನು ತಿಳಿಸಿದ್ದಾರೆ.
©2024 Book Brahma Private Limited.