ನೆಲೆ ಇಲ್ಲದವರು ಅಮ್ಮಸಂದ್ರ ಸುರೇಶ್ ಅವರ ಕೃತಿಯಾಗಿದೆ. ಬುಡಕಟ್ಟು ಅಲೆಮಾರಿಗಳ ಸಮುದಾಯದ ಉಳಿವು ಯಾವಾಗ?' ಎಂದು ಪ್ರಶ್ನಿಸುವ ಲೇಖಕರು ಅವರಿಗೆ ನೆಮ್ಮದಿಯ ನೆಲೆ ಬೇಕಾಗಿದೆ ಎನ್ನುತ್ತಾರೆ. ಈ ಕೃತಿಯಲ್ಲಿ ಒಟ್ಟು 39 ಲೇಖನಗಳಿದ್ದು ಒಂದೊಂದು ಲೇಖನವೂ ಅಲೆಮಾರಿ, ಅರೆ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಬದುಕನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇಂತಹದೊಂದು ಕೃತಿ ಕನ್ನಡ ಪುಸ್ತಕಲೋಕಕ್ಕೆ ಇಂದಿನ ಅವಶ್ಯಕತೆಯಾಗಿತ್ತು. ಈ ಸಮುದಾಯಗಳ ಕುರಿತು ತಿಳಿದುಕೊಳ್ಳಬಯಸುವವರಿಗೆ ಇದೊಂದು ಅತ್ಯುತ್ತಮ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಸಂಶೋಧಕರು, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವವರು, ವಿದ್ಯಾರ್ಥಿಗಳು, ರಾಜಕೀಯ ಕ್ಷೇತ್ರದಲ್ಲಿರುವವರು ಮತ್ತು ಸರ್ಕಾರಿ ಸೇವೆಯಲ್ಲಿರುವವರಿಗೂ ಈ ಕೃತಿಯು ಉತ್ತಮ ವಿಚಾರಗಳನ್ನು ಒದಗಿಸಬಲ್ಲದು. ಹೊಸತಲೆಮಾರಿನ ಅನೇಕ ಚಿಂತಕರಲ್ಲಿ ವಿಳಾಸವಿಲ್ಲದ ಅಲೆಮಾರಿ ಜನರ ಬಗ್ಗೆ ಮಾನವೀಯ ಅಂತಃಕರಣವುಳ್ಳ ಅನೇಕ ರೀತಿಯ ಬೆಳಕು ಚೆಲ್ಲುವ ಪ್ರಯತ್ನವು ಅತ್ಯಂತ ಸ್ವಾಗತಾರ್ಹವಾದದ್ದು. ಅಲ್ಲದೇ ಓದುಗರಿಗೆ ವಿಶಿಷ್ಟವಾದ ಹಾಗೂ ವಿಸ್ಮಯಕಾರಿಯಾದ ಕೌತುಕವುಳ್ಳ ಅಲೆಮಾರಿ ಲೋಕದರ್ಶನವನ್ನು ಮೂಡಿಸುವುದರ ಮೂಲಕ ಜನಮನರನ್ನು ಆಕರ್ಷಿಸುವ, ಮನ ಸೂರೆಗೊಳ್ಳುವ, ತನ್ನೆಡೆಗೆ ಸೆಳೆದುಕೊಳ್ಳುವ ಸಂಮೋಹನ ಶಕ್ತಿ ಈಗ ನಿಮ್ಮ ಕೈಯಲ್ಲಿರುವ “ನೆಲೆ ಇಲ್ಲದವರು” ಕೃತಿಯ ಸಂಶೋಧನಾತ್ಮಕವಾದ ಎಲ್ಲಾ ಬರಹಗಳಲ್ಲೂ ಕಾಣಬಹುದಾಗಿದೆ.
©2025 Book Brahma Private Limited.