ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟಸಮುದಾಯಗಳಲ್ಲಿ ಶವಸಂಸ್ಕಾರ -ಲೇಖಕಿ ರೇಣುಕಾ ಕೋಡಗುಂಟಿ ಅವರು ಬರೆದ ಕೃತಿ. ವಿಷಯಕ್ಕೆ ಸಂಬಂಧಿಸಿ ವಿವಿಧ ಲೇಖಕರಿಂದ ಆಹ್ವಾನಿಸಿದ ಒಟ್ಟು 21 ಲೇಖನಗಳನ್ನು ಸಂಪಾದಿಸಲಾಗಿದೆ. ಅಂತ್ಯ ಸಂಸ್ಕಾರ ಅಥವಾ ಶವಸಂಸ್ಕಾರ ವಿಷಯ ಕುರಿತು ಪಾಶ್ಚಾತ್ಯ ರಲ್ಲಿ ಗಂಭೀರವಾದ ಅಧ್ಯಯನಗಳು ನಡೆದಿವೆ. ಕನ್ನಡದಲ್ಲಿಯಂತು ತೀರಾ ವಿರಳ. ಹಾಗಾಗಿ ಈ ಪುಸ್ತಕ ಇದುವರೆಗೆ ಇದ್ದ, ಕೊರತೆಯನ್ನು ನೀಗಿಸಿದೆ ಎನ್ನಬಹುದು. ಈ ವಿಷಯಕ್ಕೆ ಸಂಬಂಧಿಸಿ ‘ಕರ್ನಾಟಕದಲ್ಲಿ ಶವಸಂಸ್ಕಾರ’ ಪುಸ್ತಕ ವನ್ನು ಈ ಕೃತಿಯ ಸಂಪಾದಕರು 2009 ರಲ್ಲಿಯೇ ತಂದಿದ್ದಾರೆ. ‘ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಶವಸಂಸ್ಕಾರ’ಎನ್ನುವ ಪುಸ್ತಕ ಎರಡನೇ ಸಂಪುಟವಾಗಿದೆ.ಕನ್ನಡದಲ್ಲಿ ಶವಸಂಸ್ಕಾರ ವಿಷಯಕ್ಕೆ ಸಂಬಂಧಿಸಿದ ಮೊಟ್ಟ ಮೊದಲ ಪುಸ್ತಕಗಳು ಎಂಬ ಹೆಗ್ಗಳಿಕೆಗೂ ಈ ಎರಡೂ ಪುಸ್ತಕಗಳು ಪಾತ್ರವಾಗಿವೆ.
ಇರುಳಿಗರ ಶವಸಂಸ್ಕಾರದ ಆಚರಣೆಗಳು ( ರವೀಂದ್ರನಾಥ್ ಬಿ.ಕೆ.), ಕರ್‍ಕರ್ ಮುಂಡರ ಶವಸಂಸ್ಕಾರ (ಮಂಜಪ್ಪ ಹೆಚ್.ಬಿ.), ಕಾಡುಕುರುಬರ ಸಾವಿಗೆ ಸಂಬಂಧಿüಸಿದ ಆಚರಣೆ (ನಾಗರಾಜ ಜಿ.ಎಸ್.), ಕಾಡುಗೊಲ್ಲರು ಮಣ್ಣುಮಾಡುವ ವಿಧಾನ (ಮೋಹನ್ ಕುಮಾರ್ ಎನ್),
ಕುಡುಬಿ ಜನಾಂಗದಲ್ಲಿ ಶವಸಂಸ್ಕಾರ ಪದ್ದತಿ (ರಾಘವೇಂದ್ರ), ಕೊರಚ ಸಮುದಾಯದ ಶವಸಂಸ್ಕಾರಪದ್ದತಿ ( ಬಸವರಾಜ ಕೆ.ಗಂಗಪ್ಪ), ಗಂಟಿಚೋರ್ ಸಮುದಾಯದ ಸಾವಿನ ಆಚರಣಾಲೋಕ (ಅರುಣ್ ಜೋಳದಕೂಡ್ಲಿಗಿ), ಗೊಂದಲಿಗರ ಶವಸಂಸ್ಕಾರದ ಆಚರಣೆಗಳು ( ಮೀನಾಕ್ಷಿ ಎಸ್.ಮುಂಡಗನೂರ), ಗೊರವ ಜನಾಂಗದ ಶವಸಂಸ್ಕಾರಪದ್ದತಿ ( ರಘುಶಂಖ ಭಾತಂಬ್ರಾ), ಚೆನ್ನದಾಸರ್ ಸಮುದಾಯದ ಶವಸಂಸ್ಕಾರ ಪದ್ದತಿ (ಮಲ್ಲಿಕಾರ್ಜುನ ಬಿ. ಮಾನ್ಪಡೆ), ಜೇನುಕುರುಬರ ಸಾವಿಗೆ ಸಂಬಂಧಿüಸಿದ ಆಚರಣೆ (ನಾಗರಾಜ ಜಿ.ಎಸ್.), ತಿಗಳರ ಶವಸಂಸ್ಕಾರ ಪದ್ದತಿ (ನಾಗರತ್ನ), ದುರಗಿ ಮರಗಿಯರ ಶವಸಂಸ್ಕಾರ ಪದ್ದತಿ ( ಅಂಬಿಕಾ), ಮ್ಯಾಸಬೇಡ ಸಮುದಾಯದ ಶವಸಂಸ್ಕಾರ ವಿಧಾನ ( ನಾಗೇಶ ಎಂ.), ಪಾರ್ದಿ ಬುಡಕಟ್ಟು ಜನಾಂಗದ ಶವಸಂಸ್ಕಾರ ಪದ್ದತಿ (ಸಂಗಪ್ಪ ತೌಡಿ), ಪುರಾಣಿ ಸೋಲಿಗ ಜನಾಂಗದ ಶವಸಂಸ್ಕಾರ ( ಮಹಾದೇವಸ್ವಾಮಿ ಪಿ.), ಲಂಬಾಣಿಗಳಲ್ಲಿ ಶವಸಂಸ್ಕಾರದ ಪದ್ದತಿ ( ಮಾಹಾದೇವಿಬಾಯಿ), ವಡ್ಡ (ಭೋವಿ) ಜನಾಂಗದ ಶವಸಂಸ್ಕಾರ ( ಮಹದೇವಸ್ವಾಮಿ ಪಿ. ಗೌಡಳ್ಳಿ), ಹಂಡಿಜೋಗಿಗಳ ಶವಸಂಸ್ಕಾರ ಪದ್ದತಿ ( ಮೇಘರಾಜ), ಹಕ್ಕಿ ಪಿಕ್ಕಿ ಸಮುದಾಯದಲ್ಲಿನ ಶವಸಂಸ್ಕಾರ ಪದ್ದತಿ ( ತಿಪ್ಪನಾಯಕಎಸ್.ಪಿ.) ಹೀಗೆ ವಿಷಯವಸ್ತುವನ್ನು ಚರ್ಚಿಸಲಾಗಿದೆ.
©2024 Book Brahma Private Limited.