ಮ್ಯಾಸನಾಯಕ ಬುಡಕಟ್ಟಿನ ಆಚರಣೆಗಳು- ಡಾ. ನಾಗೇಶ ಎಂ. ಅವರ ಕೃತಿ. ವಿಷಯವನ್ನು ಎರಡು ಪ್ರಮುಖ ವಿಭಾಗಗಳಾಗಿ ಅಂದರೆ ಜೀವನಾವರ್ತಕ ಆಚರಣೆಗಳು ಹಾಗೂ ವಿಶೇಷ ಹಬ್ಬಾಚರಣೆಗಳು ಎಂದು ವರ್ಗೀಕರಿಸಲಾಗಿದೆ. ಜೀವನಾರ್ತಕ ಆಚರಣೆಗಳಲ್ಲಿ ಹುಟ್ಟಿನಿಂದ ಸಾವಿನವರೆಗಿನ ವಿವಿಧ ಹಂತಗಳಲ್ಲಿ ನಡೆಸುವ ಆಚರಣೆಗಳ ಬಗೆಗೆ ತಿಳಿಸುವ ಮೂಲಕ ಆ ಸಮುದಾಯದ ಆಚರಣೆಗಳಲ್ಲಿನ ಪಾರಂಪರಿಕ ಜ್ಞಾನಪದ್ಧತಿಗಳ ಬಗ್ಗೆ ವಿಶ್ಲೇಷಣಾತ್ಮಕವಾಗಿ ವಿವರಿಸಲಾಗಿದೆ. ಲಿಂಗ ತಾರತಮ್ಯವಿಲ್ಲದ ಬುಡಕಟ್ಟಿನ ಸಾಮಾಜಿಕ ವ್ಯವಸ್ಥೆ, ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆ ಆಚರಣೆ, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಬಗೆ, ಬುಡಕಟ್ಟು ರಕ್ತಸಂಬಂಧಕ್ಕೆ ಸಂಬಂಧಿಸಿದಂತೆ ಸೋದರ ಅತ್ತೆ ಹಾಗೂ ಸೋದರ ಮಾವಂದಿರ ಪಾತ್ರ ಆಚರಣೆಗಳ ಸಂದರ್ಭದಲ್ಲಿ ಪಾರಂಪರಿಕ ಆಹಾರ ಪದ್ಧತಿ ಹಾಗೂ ವೈದ್ಯಪದ್ಧತಿಗಳ ಬಗೆಗೆ ತಿಳಿಸಲಾಗಿದೆ. ಸಾವಿನ ಸಂದರ್ಭದ ಆಚರಣೆಗಳು ಇಂದಿಗೂ ಪ್ರಾಚೀನ ಮಾನವರ ಶವಸಂಸ್ಕಾರ ಕ್ರಮವನ್ನೇ ಸೂಚಿಸುವಂತಿದೆ. ಜೀವನಾವರ್ತಕ ಆಚರಣೆಗಳಲ್ಲಿ ಮ್ಯಾಸಬೇಡ ಬುಡಕಟ್ಟಿನ ಪಶುಪಾಲಕ ಕಿಲಾರಿಗಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿ ಕಂಡುಬರುತ್ತದೆ.
©2024 Book Brahma Private Limited.