ಸೂಕ್ತಿ -ವ್ಯಾಪ್ತಿ (ಭಾಗ- 2) ಲೇಖಕ ಎನ್. ರಂಗನಾಥಶರ್ಮಾ ಅವರು ಸುಭಾಷಿತಗಳನ್ನು ಸಂಗ್ರಹಿಸಿದ ಕೃತಿ. ಸೂಕ್ತಿ-ವ್ಯಾಪ್ತಿಯ ಎರಡನೇ ಅಧ್ಯಾಯವಾಗಿದ್ದು, ಯಾವುದೋ ಜೀವನಾನುಭವವನ್ನೋ ಪಥದರ್ಶಕ ಸೂತ್ರವನ್ನೋ ಸ್ಮರಣೀಯ ರೀತಿಯಲ್ಲಿ ಸುಭಾಷಿತಗಳು ಅಳವಡಿಸಿರುತ್ತವೆ. ಇದರಿಂದಾಗಿ ಸುಭಾಷಿತಗಳು ಜನರ ನಿತ್ಯದ ಬದುಕಿಗೆ ನೇರವಾಗಿ ಸಂಬಂಧಪಟ್ಟಿವೆ. ಬೇರೆ ಬೇರೆ ಮೂಲಗಳಿಂದ ಆಯ್ದ ಕೆಲ ಸುಭಾಷಿತ ಶ್ಲೋಕಗಳನ್ನು ಇಲ್ಲಿ ಸಂಕಲಿಸಲಾಗಿದೆ. ಪ್ರತಿಯೊಂದು ಶ್ಲೋಕದ ಅರ್ಥವನ್ನು ಇಂದಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ವಿವೇಚಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ.
©2024 Book Brahma Private Limited.