‘ನುಡಿಯ ನೆರಳು’ಅಮೃತಾ ಪ್ರೀತಮ್ ಅವರ ಪ್ರವಾಸಕಥನವಾಗಿದೆ. ಕಣ್ಣುಂದೆಯೇ ಹಿಂದೂ-ಮುಸ್ಲಿಂ ಬಾಂಧವರ ಘೋರ ಹತ್ಯೆಗಳನ್ನು ಕಂಡು ಅಣ್ಣ-ತಮ್ಮಂದಿರ ಕೈಗಳಲ್ಲೇಕೆ ಶಸ್ತ್ರಾಸ್ತ್ರಗಳೆಂದು ಆಳವಾಗಿ ಚಿಂತಿಸಿದ ಶಾಂತಿಪ್ರಿಯರು. ತಾವು ಎದುರಿಸಿದ ಭಯಾನಕ ಸನ್ನಿವೇಶಗಳನ್ನು ಆತ್ಮಕಥೆಯಂತೆ ಈ ಪ್ರವಾಸಕಥನದಲ್ಲಿ ತಿಳಿಸಿದ್ದಾರೆ.
ಹೊಸತು-2003- ಎಪ್ರಿಲ್
ಅಮೃತಾ ಪ್ರೀತಮ್ ಪಂಜಾಬಿ ಸಾಹಿತ್ಯದಲ್ಲಿ ಭಾರತೀಯ ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ್ಯ ಸಂಗ್ರಾಮದ ದಂಗೆಯ, ದೇಶ ವಿಭಜನೆಯ ಕರಾಳ ದಿನಗಳಲ್ಲಿ ಕವನಗಳ ಮೂಲಕ ಹಿಂಸೆ- ಕ್ರೌರ್ಯವನ್ನು ಪ್ರತಿಭಟಿಸಿದವರು. ಕಣ್ಮುಂದೆಯೇ ಹಿಂದೂ-ಮುಸ್ಲಿಂ ಬಾಂಧವರ ಘೋರ ಹತ್ಯೆಗಳನ್ನು ಕಂಡು ಅಣ್ಣ-ತಮ್ಮಂದಿರ ಕೈಗಳಲ್ಲೇಕೆ ಶಸ್ತ್ರಾಸ್ತ್ರಗಳೆಂದು ಆಳವಾಗಿ ಚಿಂತಿಸಿದ ಶಾಂತಿಪ್ರಿಯರು. ತಾವು ಎದುರಿಸಿದ ಭಯಾನಕ ಸನ್ನಿವೇಶಗಳನ್ನು ಆತ್ಮಕಥೆಯಂತೆ ಹೇಳಿಕೊಂಡಿದ್ದಾರೆ.
©2024 Book Brahma Private Limited.