‘ಅದ್ಭುತಯಾನ’ ಥಾರ್ ಹೈರ್ಡಾಲ್ ರ ಕೊಂಟಿಕಿ ಎಕ್ಸ್ ಪಿಡಿಶನ್ ಪುಸ್ತಕದ ಸಂಗ್ರಹ ಭಾವಾನುವಾದ. ಪೆಸಿಫಿಕ್ ಮಹಾಸಾಗರ ಜಗತ್ತಿನ ಅತ್ಯಂತ ವಿಸ್ತಾರವಾದ ಜಲರಾಶಿ. ಇದರ ಮಧ್ಯೆ ಇರುವ ದೀಪ ಸಮುದಾಯಗಳನ್ನು ಪಾಲಿನೇಷ್ಯಾ ಎಂದು ಕರೆಯುತ್ತಾರೆ. ಯೂರೋಪಿಯನ್ನರು ಈ ದೀಪಸ್ತೋಮಗಳನ್ನು ಮೊಟ್ಟಮೊದಲು ಕಂಡಾಗ, ಆಗಾಲೇ ಅಲ್ಲಿ ದ್ವೀಪ ನಿವಾಸಿಗಳಿದ್ದಿದ್ದು ಎಲ್ಲರಿಗೂ ಬಹು ದೊಡ್ಡ ಒಗಟಾಗಿತ್ತು. ಆ ಎಲ್ಲ ದ್ವೀಪಗಳೂ ಸಹಸ್ರಾರು ಮೈಲು ವಿಸ್ತಾರದ ಪೆಸಿಫಿಕ್ ಮಹಾಸಾಗರದಿಂದ ಸುತ್ತುವರಿದಿತ್ತು. ದೋಣಿ ಅಥವಾ ಹಡಗುಗಳನ್ನು ಕಟ್ಟುವ ತಂತ್ರಜ್ಞಾನವೇ ಗೊತ್ತಿಲ್ಲದ ದಕ್ಷಿಣ ಅಮೆರಿಕಾದ ಜನರೇ ಇಲ್ಲಿಗೆ ವಲಸೆ ಬಂದರೆಂದು ಸಾಧಿಸಲು ಆ ಜನರಿಗೆ ಗೊತ್ತಿದ್ದ ನೌಕೆಗಳೆಂದರೆ ತೆಪ್ಪಗಳು ಮಾತ್ರ. ಅವುಗಳ ಮೇಲೂ ಮಹಾ ಸಾಗರಗಳನ್ನು ದಾಟಲು ಸಾಧ್ಯ ಎಂದು ತೋರಿಸಿದರೆ ಮಾತ್ರ ಪಾಲಿ ನೇಷಿಯನ್ನರು ದಕ್ಷಿಣ ಅಮೆರಿಕಾದಿಂದ ಬಂದ ಸೂರ್ಯವಂಶಜರೆಂದು ಸಾಧಿಸಬಹುದಿತ್ತು. ಈ ಸವಾಲನ್ನೆದುರಿಸಿ ಪ್ರಾಚೀನ ತೆಪ್ಪವೊಂದರ ಮೇಲೆ ಪೆಸಿಫಿಕ್ ಮಹಾಸಾಗರವನ್ನು ದಾಟಿದ ಆರು ಜನ ಮಹಾ ಸಾಹಸಿಗಳ ಕಥೆ 'ಅದ್ಭುತ ಯಾನ' .
ಇದು ಪ್ರದೀಪ ಕೆಂಜಿಗೆಯವರ ಎರಡನೆಯ ಪುಸ್ತಕ. ಥಾರ್ ಹೈರ್ಡಾಲ್‌ರ 'ಕೊಂಟಿಕಿ' ಸಾಹಸಕಥೆ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ದ ಸಾಹಸ ಕಥಾ ಸಾಹಿತ್ಯ. ಅದನ್ನು ಅತಿ ಸುಂದರವಾಗಿ ಮೂಲದ ಆಶಯಗಳಿಗೆ ಕೊಂಚವೂ ಕುಂದಾಗದಂತೆ ಪ್ರದೀಪ ಕೆಂಜಿಗೆ ಅವರು ಭಾಷಾಂತರ ಮಾಡಿದ್ದಾರೆ.
©2024 Book Brahma Private Limited.