‘ಮಿಷನರಿ ಪ್ರವಾಸ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ’ ಕೃತಿಯು ಹೆರ್ಮನ್ ಮ್ಯೋಗ್ಲಿಂಗ್ ಗಾಟ್ ಫ್ರೈಡ್ ವೈಗ್ಲೆ ಅವರ ಜರ್ಮನ್ ಕೃತಿಯಾಗಿದ್ದು, ಇಂಗ್ಲಿಷ್ ಗೆ ಜೆನ್ನಿಫರ್ ಜೆಂಕಿನ್ಸ್ ಹಾಗೂ ಕನ್ನಡಕ್ಕೆ ಎ.ವಿ. ನಾವಡ ಅವರು ಅನುವಾದಿಸಿದ್ದಾರೆ. ನಂದಕಿಶೋರ್ ಎಸ್ ಅವರ ನೆರವನ್ನು ಅನುವಾದದಲ್ಲಿ ಪಡೆಯಲಾಗಿದೆ. ದಕ್ಷಿಣ ಕನ್ನಡ, ಕೇರಳಕ್ಕೆ ಸೇರಿದ ಈಗಿನ ಕಾಸರಗೋಡು ಜಿಲ್ಲೆಗಳಲ್ಲಿ ಓಡಾಡಿದವರಿಗೆ ಇಡೀ ಕೃತಿ ಪ್ರವಾಸಕಥನದಂತೆ ಕಂಡುಬರುತ್ತದೆ. ಜೊತೆಗೆ ಅಲ್ಲಿನ ದೈವಗಳ ಬಗ್ಗೆ ಇಲ್ಲಿ ಸುದೀರ್ಘವಾದ ವಿವರಣೆಗಳನ್ನು ಕಾಣಬಹುದು. ಅನುವಾದಕನ ಟಿಪ್ಪಣಿಯಡಿ ನಾವಡ ಅವರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಮೋಗ್ಲಿಂಗ್ ಉಲ್ಲೇಖಿಸುವ ಅನೇಕ ಅಂಶಗಳನ್ನು ಪ್ರಶ್ನಿಸುತ್ತಲೇ ಇಲ್ಲಿ ವಿಶ್ಲೇಷಿಸಲಾಗಿದೆ. ತುಳುನಾಡಿನ ದೈವಗಳನ್ನು ಮೋಗ್ಲಿಂಗ್ ತಪ್ಪಾಗಿ ಗ್ರಹಿಸಿರುವುದನ್ನು ಲೇಖಕರು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ. ಕೃತಿಯ ಕೊನೆಯಲ್ಲಿ 1896 ರಿಂದ 1921ರ ಅವಧಿಯಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ತೆಗೆದ ಕಪ್ಪು ಬಿಳುಪಿನ ಚಿತ್ರಗಳನ್ನು ನೀಡಲಾಗಿದೆ.
©2024 Book Brahma Private Limited.