ಲೇಖಕ ಡಾ. ಜಿ. ಭಾಸ್ಕರ ಮಯ್ಯ ಅವರು ಮೂಲ ಮರಾಠಿಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಪ್ರವಾಸ ಕಥನ- ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ’. ವಿಷ್ಣುಭಟ್ಟ ಗೋಡ್ಸೆ ಅವರು ಮರಾಠಿಯಲ್ಲಿ 1883 ರಲ್ಲಿ ಈ ಕೃತಿಯನ್ನು ಬರೆದಿದ್ದು, ಅವರ ನಿಧನಾನಂತರ 1907 ರಲ್ಲಿ ಎರಡನೇ ಬಾರಿಗೆ ಕೃತಿಯು ಮಾಝಾ ಪ್ರವಾಸ ಹೆಸರಿನಲ್ಲಿ ಮರು ಮುದ್ರಣಗೊಳ್ಳುತ್ತದೆ. ಇಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಸಮಾಜವನ್ನು ಹೇಗೆ ತನ್ನ ಅನುಭವಗಳಲ್ಲಿ ಚಿತ್ರಿಸುತ್ತಾನೆ ಹಾಗೂ ಚಿತ್ರಿಸಿದ ಸಂಗತಿಗಳು ಅದೆಷ್ಟು ಸುಂದರ, ಸತ್ಯ ಸಂಗತಿಗಳು ಆಗಬಹುದು ಎಂಬುದಕ್ಕೆ ಈ ಗ್ರಂಥ ಒಂದು ಉದಾಹರಣೆ. 1857ರಲ್ಲಿ ಭಾರತದ ಪ್ರಥಮ ಮಹಾಸಂಚಲನದಲ್ಲಿ ಆದ ಘಟನೆಗಳನ್ನು ವಿವರಿಸುತ್ತಾರೆ. ಇಲ್ಲಿ ಸಿಪಾಯಿಗಳ ಜೀವನ ಕುರಿತ ಸಮಗ್ರ ವಿಚಾರವನ್ನು ಕಟ್ಟಿಕೊಡುವ ಗೋಡ್ಸೆ, ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರು ಹಾಗೂ ಭಾರತೀಯ ಸಿಪಾಯಿಗಳು ಲೂಟಿಕೋರರ ಕೈಗೆ ಸಿಕ್ಕಿ, ತಾವು ಪಡೆದುಕೊಂಡದನ್ನೆಲ್ಲಾ ಕಳೆದುಕೊಂಡ ವಿಚಾರವನ್ನು ಪ್ರಸ್ತುತಪಡಿಸುತ್ತಾರೆ. ಹೀಗೆ ಅವರ ಅನುಭವದ ಬುತ್ತಿಯಿಂದ ಬಂದಂತಹ ಹಲವಾರು ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.