ಇದೊಂದು ಅನುವಾದಿತ ಕೃತಿಯಾಗಿದ್ದು, ಭಾರತದ ಸ್ವಾತಂತ್ರ್ಯ ಘೋಷಣೆಯಾಗಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಭಾರತಕ್ಕೆ ಬಂದ ಬರ್ಕ್ವೈಟ್ ತಾನು ಕಂಡ ಎಲ್ಲಾ ವಾಸ್ತವಿಕ ಅಂಶಗಳನ್ನು ತನ್ನ ಛಾಯಾಗ್ರಹಣದಲ್ಲಿ ಮತ್ತು ಬರವಣಿಗೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಅದೊಂದು ಸಂಧಿಕಾಲ. ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಗೊಳ್ಳುತ್ತಿರುವ ಒಂದು ಭೂಖಂಡ, ಅದರೊಳಗಿನ ವಿವಿಧ ಜನಸಮುದಾಯಗಳ ಪಾಡು ಹಾಗೂ ಅದರ ಹಿಂದೆ ಇರುವ ವೇದನೆ, ದುಃಖ, ಸಂಕಟಗಳೆಲ್ಲವನ್ನು ಒಂದು ಅಮೂಲ್ಯ ಸೃಜನಶೀಲ ದಾಖಲಾತಿಯನ್ನಾಗಿ ಅವುಗಳನ್ನು ಒಂದು ಕೃತಿಯಲ್ಲಿ ಸಂಪಾದಿಸಿದ್ದರು. ಇದನ್ನು ಅನುವಾದಕಿ ಸಂಧ್ಯಾರೆಡ್ಡಿಯವರು ಅನುವಾದಿಸಿದ್ದಾರೆ.
©2025 Book Brahma Private Limited.