ಕಾವೇರಿ ತೀರದ ಪಯಣ

Author : ವಿಕ್ರಂ ಕಾಂತಿಕೆರೆ

Pages 240

₹ 250.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ (ಪೂರ್ವ), ಬೆಂಗಳೂರು-560001,
Phone: 0802216 1900,

Synopsys

ಕಾವೇರಿ ತೀರದ ಪಯಣ-ವಿಕ್ರಂ ಕಾಂತಿಕೆರೆ ಅವರು ಅನುವಾದಿಸಿದ ಪ್ರವಾಸ ಕಥನ. ವಿಮರ್ಶಕ, ಸಾಂಸ್ಕೃತಿಕ ಚಿಂತಕ ಓ. ಕೆ. ಜೋಣಿಯವರು ರಚಿಸಿದ ಈ ಮಲಯಾಳಂ ಕೃತಿಯ ಕನ್ನಡಾನುವಾದವಿದು. ಈ ಕೃತಿಯು ಇತಿಹಾಸ ಕಥನವೂ ಆಗಿದೆ. ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ವರೆಗಿನ ನದಿ ಪಾತ್ರದಲ್ಲಿನ ಪುರಾತನ ನಾಗರಿಕತೆ, ಜನಜೀವನ, ಆಳಿದ ರಾಜವಂಶಗಳ ಏಳುಬೀಳಿನ ಚಿತ್ರಣ, ಸಾಂಸ್ಕೃತಿಕ ವೈಭವ ಇವೆಲ್ಲವನ್ನೂ ಒಳಗೊಂಡ ಕೃತಿ ಇದೆ.

ಕೇರಳದ ಕೋಯಿಕ್ಕೋಡ್ ನ  ಮಾತೃಭೂಮಿ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕಂಪೆನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಪಿ.ವೀರೇಂದ್ರ ಕುಮಾರ್ ಕೃತಿಗೆ ಮುನ್ನುಡಿ ಬರೆದು ‘ ಕರ್ನಾಟಕ ಮತ್ತು ತಮಿಳುನಾಡಿನ ಹತ್ತು ಶತಮಾನಗಳ ಇತಿಹಾಸದೊಂದಿಗೆ ಕೃತಿಕಾರ ಹೆಜ್ಜೆ ಹಾಕಿದ್ದಾರೆ. ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕೆಲವೇ ಅಧ್ಯಾಯಗಳಲ್ಲಿ ಪರಿಚಯಿಸಲು ಸಮರ್ಥರಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಭೂತಕಾಲದ ಅಪೂರ್ವ ಮಾಹಿತಿಗಳು ಇಲ್ಲಿವೆ. ಆದ್ದರಿಂದ ಈ ಪ್ರವಾಸಕಥನ ಓದುಗರಿಗೆ ಮಾತ್ರವಲ್ಲ; ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತಿಹಾಸದ ಮೇಲೆ ಆಸಕ್ತಿ ಇರುವವರಿಗೂ ಆಪ್ತವಾಗಲಿದೆ. ಕನ್ನಡ ಸಾಹಿತ್ಯದ ಅಸಾಮಾನ್ಯ ಕೃತಿಗಳಲ್ಲಿ ಒಂದಾದ ಪಂಪಭಾರತದಿಂದ ಹಿಡಿದು ಶ್ರೀಕೃಷ್ಣ ಆಲನಹಳ್ಳಿ, ಯು.ಆರ್.ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ವರೆಗಿನ ಆಧುನಿಕ ಸಾಹಿತಿಗಳ ಕೃತಿಗಳ ಮಲಯಾಳಂ ಅನುವಾದವನ್ನು ಪ್ರಕಟಿಸಿದ ‘ಮಾತೃಭೂಮಿ’ ಒ.ಕೆ.ಜೋಣಿ ಅವರ ಈ ಕೃತಿಯನ್ನೂ ಪ್ರಕಟಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನ ಸಂಸ್ಕೃತಿ-ಪರಂಪರೆಯ ಮೇಲೆ ಆಳವಾದ ಪ್ರಭಾವ ಬೀರಿರುವ ಕಾವೇರಿ ನದಿಯ ಕುರಿತ ಈ ಕೃತಿ ಮಲಯಾಳಂನಲ್ಲಿ ಈಗಾಗಲೇ ಸಾಕಷ್ಟು ಓದುಗರ ಮನ ಮುಟ್ಟಿದೆ. ಈ ಕೃತಿಯ ಸುಂದರ ಅನುವಾದ ಮಲಯಾಳಂನ ಸಹೋದರ ಭಾಷೆಯಾದ ಕನ್ನಡದಲ್ಲಿ ಈಗ ಪ್ರಕಟವಾಗುತ್ತಿದೆ. ಕನ್ನಡದ ಓದುಗರಿಗೆ ಕೃತಿಯನ್ನು ಅರ್ಪಿಸಲು ‘ಮಾತೃಭೂಮಿ’ಯ ಸಾರಥಿ ಎಂಬ ನೆಲೆಯಲ್ಲಿ ನನಗೆ ಅತೀವ ಸಂತಸವಾಗುತ್ತಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವಿಕ್ರಂ ಕಾಂತಿಕೆರೆ

ಲೇಖಕ ವಿಕ್ರಂ ಕಾಂತಿಕೆರೆ ಅವರು ಕಾಸರಗೋಡು ಜಿಲ್ಲೆಯ ಕೂಡ್ಲು-ರಾಮದಾಸ ನಗರ ವ್ಯಾಪ್ತಿಯ ಕಾಂತಿಕೆರೆಯವರು. ಕೂಡ್ಲುವಿನಲ್ಲಿ ಪ್ರೌಢಶಿಕ್ಷಣ, ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪಿಡಿಸಿ (ಪ್ರಿ-ಡಿಗ್ರಿ ಕೋರ್ಸ್), ಪದವಿ ಮತ್ತು ಸ್ನಾತಕೋತ್ತರ ಪದವಿ. ಅದೇ ಕಾಲೇಜಿನ ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರದಲ್ಲಿ ‘ಕನ್ನಡ ಮತ್ತು ಮಲಯಾಳಂನ ಮೊದಲ ಘಟ್ಟದ ಕಾದಂಬರಿಗಳು.’ ವಿಷಯವಾಗಿ  ಎಂ.ಫಿಲ್ ಪಡೆದರು. ಪತ್ರಿಕೋದ್ಯಮದ ವಿವಿಧ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ ಅನುಭವ ಇದೆ. ಕೃತಿಗಳು: ಕಾವೇರಿ ತೀರದ ಪಯಣ (ಅನುವಾದಿತ ಕೃತಿ) ಪ್ರಶಸ್ತಿ-ಪುರಸ್ಕಾರಗಳು: ಮಾಧ್ಯಮ ಅಕಾಡೆಮಿ, ಚರಕ, ರಾಜ್ಯ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಮೈಸೂರಿನ ರೋಟರಿ ಮಿಡ್ ...

READ MORE

Reviews

‘ಕಾವೇರಿ ಪಯಣ’ ಕೃತಿಯ ವಿಮರ್ಶೆ

ಮೂವೃತ್ತೈದು: ಅಧ್ಯಾಯಗಳಲ್ಲಿ ಕಾವೇರಿಯ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗಿನ ಜಾಡನ್ನು, ಹಾದು ಹೋಗುವ ನಗರಗಳ, ಪಟ್ಟಣಗಳ, ಸ್ಥಳಪುರಾಣ, ಇತಿಹಾಸಗಳನ್ನೊಳಗೊಂಡ ಕೃತಿ. ಕೊಡಗಿನ ಸಣ್ಣಪುಟ್ಟ ರಾಜರುಗಳ ಕಿತಾಪತಿ, ಅವರ ಪರಿವಾರದವರ ಒಳಸಂಚುಗಳು, ಅವರ ಪತ್ನಿಯರು, ಉಪಪತ್ನಿಯರ ಸಹಗಮನ ಇತ್ಯಾದಿ ವಿವರಗಳನ್ನೂರ ಗೊಂಡ ಕತಗಳಿವೆ ಹಲವಾರು ಅಧ್ಯಾಯಗಳಲ್ಲಿ. ಹೈದರಾಲಿಯ ಮತ್ತು ಟಿಪ್ಪುಸುಲ್ತಾನನ ಪರಮತ ಸಹಿಷ್ಣುತೆ ಕುರಿತು ನಾಲ್ಕಾರು ಅಧ್ಯಾಯಗಳಿವೆ. ದೇವಾಲಯಗಳಿಗೆ, ಹಿಂದೂ ಮಠಾಧಿಪತಿಗಳಿಗೆ, ಮುಖ್ಯವಾಗಿ ಶೃಂಗೇರಿ ಜಗದ್ಗುರುಗಳಿಗೆ ಅವರ ಕೊಡುಗೆ ಕುರಿತ ವಿವರಗಳಿವೆ. ಹೈದರಾಲಿಯ ಮತ್ತು ಟಿಪ್ಪುಸುಲ್ತಾನನ ಪರಮತ ಸಹಿಷ್ಣುತೆ ಕುರಿತು ನಾಲ್ಕಾರು ಅಧ್ಯಾಯಗಳಿವೆ. ದೇವಾಲಯಗಳಿಗೆ ಹಿಂದೂ ಮಠಾಧಿಪತಿಗಳಿಗೆ, ಮುಖ್ಯವಾಗಿ ಶೃಂಗೇರಿ ಜಗದ್ಗುರುಗಳಿಗೆ ಅವರ ಕೊಡುಗೆ ಕುರಿತ ವಿವರಗಳಿವೆ. 'ಹಿಂದೂ ಸಂಸ್ಕಾರಕ್ಕೆ ಧಕ್ಕೆಯಾಗದಂತೆ ಆಚರಣೆಗಳನ್ನು ನಡೆಸುತ್ತಿದ್ದ ಹೈದರಾಲಿ ಮೈಸೂರಿನ ಆಡಳಿತಾಧಿಕಾರಿ ಈ ಯಾಗಿದ್ದರೂ ರಾಜನನ್ನು ಎದುರುಗೊಳ್ಳುವಾಗ ಸಾಷ್ಟಾಂಗ ನಮಸ್ಕಾರ ಮಾಡುವ ಪದ್ಧತಿಯನ್ನು ಉಳಿಸಿಕೊಂಡಿದ್ದ ! 'ಹೈದರಾಲಿಯ ಮತ್ತು ಟಿಪ್ಪುಸುಲ್ತಾನನ ಪ್ರತಿರೋಧವನ್ನು ಮಟ್ಟಹಾಕಲು ಬ್ರಿಟಿಷರು ಇವರಿಬ್ಬರಿಗೂ ಧರ್ಮಾಂಧರು ಎಂಬ ಪಟ್ಟಕಟ್ಟಿದ್ದರು ! ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಧರ್ಮಾಂಧರಾಗಿರಲಿಲ್ಲ ಎಂಬುದನ್ನು ಬ್ರಿಟಿಷ್ ವಕ್ತಾರರ - ಪೈಕಿ ಕೆಲವರಾದರೂ ಒಪ್ಪಿಕೊಂಡಿದ್ದಾರೆ' ಇಂಥ ಹಲವು ಉಲ್ಲೇಖಗಳನ್ನು ಈ ಕೃತಿ ಒಳಗೊಂಡಿದೆ. ಈ ಅಧ್ಯಾಯಗಳಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಪರಧರ್ಮ ಸಹಿಷ್ಣುತೆ ಕುರಿತು ಸುದೀರ್ಘವಾಗಿ ಲೇಖಕರು ಪ್ರಸ್ತಾಪ ಮಾಡಿದ್ದಾರೆ.

ಕಾವೇರಿ ನಮ್ಮ ರಾಜ್ಯಕ್ಕೆ ಎಷ್ಟು ಪವಿತ್ರವೋ, ಅಷ್ಟೇ ಅಮೂಲ್ಯ ನೆರೆಯ ತಮಿಳುನಾಡಿಗೆ, ತಂಜಾವೂರಿನ ಭತ್ತದ ಪೈರಿಗೆ ನೀರುಣಿಸಿ ಕಾವೇರಿ ಸದ್ಗುರು ವಾಗ್ಗೇಯಕಾರ ತ್ಯಾಗರಾಜ ಭಾಗವತರ ಪಾದತೊಳೆದು, ಬೃಹದೇಶ್ವರನ ಸನ್ನಿಧಿಗೆ ಭೇಟಿನೀಡುವ ಮಹಾತಾಯಿ, ಶ್ರೀರಂಗದ ಅಂಡಾಳ್ ಬೃಂದಾವನವನ್ನು ಸಂದರ್ಶಿಸಿ, ಚಿದಂಬರದ ನಟರಾಜನ ನೃತ್ಯಲಾಸ್ಯವನ್ನು ಹೀರಿ ಕಾವೇರಿ ತನ್ನ ಕೊನೆಯ ಪಯಣದತ್ತ ಸಾಗುತ್ತಾಳೆ. ಇದು ಒಂದು ಪಯಣದ ಕತೆ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪತ್ರಕರ್ತ ಪಿ. ಕೆ. ಜೋಣಿ ಮಲೆಯಾಳಂನಲ್ಲಿ, ಅಷ್ಟೇ ಸಮರ್ಥವಾಗಿ ಕನ್ನಡಿಸಿದ್ದಾರೆ ಕಾಸರಗೋಡಿನ ವಿಕ್ರಂ ಕಾಂತಿಕೆರೆ. ರಾಜ್ಯದ ಒಂದು ನದಿಯೇ ಅದರ ಹಿರಿಮೆ, ಗರಿಮೆಗಳೇ ಇಂಥ ಅದ್ಭುತಗಳನ್ನೊಳಗೊಂಡಿದ್ದರೆ, ನಮ್ಮ ಭಾರತ ದೇಶದ ಇನ್ನಿತರ ನದಿಗಳ ಜಾಡನ್ನು ಅನುಸರಿಸಿದರೆ ಇನ್ನೆಂಥ ಐತಿಹಾಸಿಕ ರಹಸ್ಯಗಳು ಅಡಗಿವೆಯೋ.

(ಕೃಪೆ ; ಹೊಸತು, ಬರಹ ; ಸಿ. ಆರ್. ಕೃಷ್ಣರಾವ್)

Related Books