ಲೇಖಕ ಶರಣಬಸಪ್ಪ ವಡ್ಡನಕೇರಿ ಅವರ ಕೃತಿ ಗಾದೆಗಳ ಅಂತರಂಗ. ಗಾದೆಗಳು ಕರ್ನಾಟಕದ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿವೆ. ಜನತೆ ತಮ್ಮ ಮಾತಿನ ನಡುವೆ ಗಾದೆಗಳನ್ನು ಬಳಸಿ ಮಾತಿಗೆ ಮೋನಚನ್ನು ಮಹತ್ವವನ್ನು ಉದ್ದೇಶವನ್ನು ಸಾಧಿಸುತ್ತಾರೆ. ಗಾದೆಗಳನ್ನು ಸಾಂದರ್ಭಿಕವಾಗಿ ಅರ್ಥವತ್ತಾಗಿ ಬಳಸಿ 'ಮಾತಿನ ಮಲ್ಲ' ಎಂಬ ಬಿರುದು ಪಡೆಯುತ್ತಾರೆ. ಮಾತುಗಾರಿಕೆಯಿಂದ ಗಾದೆಯನ್ನು ಸೊಗಸಾಗಿ ಬಳಸುವುದರಿಂದ ಒಬ್ಬರ ಆತ್ಮೀಯತೆಗೆ ಒಬ್ಬರು ಒಳಗಾಗಿ ಅಂತರಂಗವನ್ನು ಗೆಲ್ಲಬಹುದು. ಬದುಕು ಮೃದು ಮಧುರವಾಗಬಹುದು ಊಟದ ನಡುವೆ ಉಪ್ಪಿನಕಾಯಿಯಂತೆ ಮಾತನಾಡಬೇಕಾದ ಮಾತಿನ ಮಾಧುರ್ಯವನ್ನು ಹೆಚ್ಚಿಸುತ್ತವೆ. ಹತ್ತು ಮಾತನಾಡುವ ಕಡೆಗೊಂದು ಗಾದೆ ಸಮರ್ಪಕವಾಗಿ,ಸಮರ್ಥವಾಗಿ ಬಳಕೆಯಾದರೆ ಉದ್ದೇಶ ಸಾರ್ಥಕವಾಗುತ್ತದೆ. ಗಾದೆಗಳಿಂದ ಬದುಕಿನ ವ್ಯವಹಾರ ಕುದುರುತ್ತದೆ.ಬಾಳು ಅಪ್ಯಾಯಮಾನ ಆನಂದದಾಯಕವಾಗಿರುತ್ತದೆ. ಆದ್ದರಿಂದಲೇ ಜನಪದರು ನಗರ ಜನಪದ ಗಾದೆಗಳನ್ನು ಬಳಸುತ್ತಾರೆ. ಈ ಕೃತಿಯಲ್ಲಿ 26 ಗಾದೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದು,ವಿದ್ಯಾರ್ಥಿಗಳ ಪರೀಕ್ಷಾ ಅನುಕೂಲಕ್ಕಾಗಿ ರಚಿಸಲಾಗಿದೆ.
©2024 Book Brahma Private Limited.