ಬೇಂದ್ರೆ, ಕೆ.ಎಸ್.ನ. ಹಾಗೂ ಜೀವಿ

Author : ಸುರೇಖಾ ಆರ್. ನಾಯ್ಕ್

Pages 240

₹ 200.00




Year of Publication: 2014
Published by: ಕನ್ನಡ ಅಧ್ಯಯನ ವಿಭಾಗ, ಮುಂಬೈ ವಿಶ್ವವಿದ್ಯಾಲಯ

Synopsys

ಕನ್ನಡದಲ್ಲಿ ಪ್ರೇಮಕಾವ್ಯ ಎಂದರೆ ಮೊದಲಿಗೆ ನೆನಪಾಗುವುದು ಬೇಂದ್ರೆ, ಕೆ.ಎಸ್.ನ. ಮತ್ತು ಜೀವಿ. ಈ ಮೂವರು ಪ್ರೇಮಕವಿಗಳ ಕವಿತೆಗಳ ತೌಲನಿಕ ಅಧ್ಯಯನ ಈ ಗ್ರಂಥದಲ್ಲಿದೆ. ಮೂವರೂ ಕವಿಗಳು ಸಮಕಾಲೀನರಾದರೂ ವಿಭಿನ್ನ ಕಾಲಘಟ್ಟದಲ್ಲಿ ಬದುಕಿ ಕವಿತೆ ರಚಿಸಿದ್ದಾರೆ. ಬೇಂದ್ರೆಯವರ ಸಖಿಗೀತ, ನರಸಿಂಹಸ್ವಾಮಿ ಅವರ ’ಮೈಸೂರು ಮಲ್ಲಿಗೆ’ ಹಾಗೂ ಜೀವಿಯವರ ’ಹುಚ್ಚ ಹುಚ್ಚಿ’ ಸಂಕಲನಗಳು ಕನ್ನಡ ಕಾವ್ಯದ ಅದರಲ್ಲೂ ವಿಶೇಷವಾಗಿ ಪ್ರೇಮಕಾವ್ಯದ ಮೈಲಿಗಲ್ಲುಗಳು. ಈ ಪ್ರೇಮಕವಿಗಳ ಕವಿತೆಗಳ ಮಹತ್ವ ಹಾಗೂ ಅವುಗಳ ವಿಭಿನ್ನ ವೈಶಿಷ್ಟ್ಯಗಳನ್ನು ಈ ಗ್ರಂಥದಲ್ಲಿ ಚರ್ಚಿಸಲಾಗಿದೆ.

About the Author

ಸುರೇಖಾ ಆರ್. ನಾಯ್ಕ್

ಮೂಲತಃ ಕಾಸರಗೋಡಿನವರಾದ ಸುರೇಖಾ ಆರ್‌. ನಾಯ್ಕ್‌ ಅವರ ತಂದೆ-ತಾಯಿ ನೆಲೆಸಿದ್ದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷವನ್ನು ಅರೇಹಳ್ಳಿ, ಸಕಲೇಶಪುರ ಮತ್ತು ಬೇಲೂರಿನಲ್ಲಿ ಪಡೆದ ಸುರೇಖಾ ಅವರು ಕಾಲೇಜು ದಿನಗಳಲ್ಲಿ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾಗಿದ್ದರು. ಕಾವ್ಯ ರಚನೆ, ಏಕಪಾತ್ರಾಭಿನಯ, ನಾಟಕದಲ್ಲಿ ಅಭಿನಯದಲ್ಲಿ ಪಾಲುಗೊಳ್ಳುತ್ತಿದ್ದರು. ರಾಜ್ಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದರು. ಬಿ.ಎ. ಪದವಿ ಪೂರ್ಣಗೊಳಿಸಿದ ನಂತರ ಭಾರತೀಯ ಜೀವ ವಿಮಾ ನಿಗಮದಲ್ಲಿ ಕೆಲಸಕ್ಕೆ ಸೇರಿದರು.  ಮುಂಬೈಗೆ ವರ್ಗವಾದ ನಂತರ ಮುಂಬೈ ವಿಶ್ವವಿದ್ಯಾಲಯ ಸೇರಿ ಎಂ.ಎ. ಪದವಿಯನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಪಾಸಾದರು. ಜಿ.ಎನ್. ಉಪಾಧ್ಯ ...

READ MORE

Related Books