ಡಾ. ಶಿವರಾಜರವರು ಜೀವನೋತ್ಸಾಹದಿಂದ ಕೂಡಿದ ಚಿಂತನಾಶೀಲ ವ್ಯಕ್ತಿ, ತರುಣ ಲೇಖಕರಾದ ಇವರು ಈಗಾಗಲೇ ಹಲವು ಕೃತಿಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಶಿವರಾಜ ಬಡಿಗೇರ್ ಎಂದೇ ಪರಿಚಿತರಾಗಿದ್ದಾರೆ. ಇವರು ತಮ್ಮ ಸ್ವಂತ ಕೃತಿಗಳ ರಚನೆಗಷ್ಟೇ ಸೀಮಿತವಾಗದೆ, ತಮ್ಮ ಸಮಕಾಲೀನ ಪ್ರತಿಭಾವಂತ ಯುವ ಸಂಶೋಧಕರಿಂದ ಬದುಕಿನ ವಿವಿಧ ಶಿಸ್ತುಗಳ ಬಗೆಗೆ ಲೇಖನಗಳನ್ನು ಬರೆಸಿ, ಸಂಪಾದಿಸುವ ಮೂಲಕ ತಮ್ಮೊಂದಿಗೆ ಲೇಖಕರ ಪಡೆಯೊಂದನ್ನು ರೂಪಿಸುತ್ತಿದ್ದಾರೆ.
ತಾನಷ್ಟೇ ಅಲ್ಲದೆ ತನ್ನ ಪರಿಸರವನ್ನು ಚಿಂತನಶೀಲ ಪ್ರಕ್ರಿಯೆಗೆ ತೊಡಗಿಸಿರುವ ಡಾ. ಶಿವರಾಜರವರು ಬೌದ್ಧಿಕ ವಿಸ್ತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕೃತಿಯಲ್ಲಿ ಕಥೆ, ಕಾದಂಬರಿ, ಕವಿತೆ, ಮೊದಲಾದ ಸಾಹಿತ್ಯ ಪ್ರಕಾರಗಳಷ್ಟೇ ಅಲ್ಲದೆ ಚರಿತ್ರೆ, ಮಹಿಳೆ, ಕೃಷಿ, ನೀರಾವರಿ ಯೋಜನೆ ಮೊದಲಾದ ಬದುಕಿನ ವಿವಿಧ ಆಯಾಮಗಳನ್ನು ಕುರಿತು ಈ ಕಾಲದ ಯುವ ಸಮುದಾಯದ ಗ್ರಹಿಕೆಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಈ ಕಾಲದ ಚಿಂತನೆಯ ಇತಿ-ಮಿತಿಗಳನ್ನು ಕಟ್ಟಿಕೊಡುವ ಇಲ್ಲಿನ ಲೇಖನಗಳು ಬದುಕಿನ ಬಗೆಗೆ ಭರವಸೆಯನ್ನು ಮೂಡಿಸುತ್ತವೆ.
©2025 Book Brahma Private Limited.