ಇಲ್ಲಿನ ಬರಹಗಳು ಡಿ.ವಿ.ಜಿ, ಬೇಂದ್ರೆ, ವಿಸೀ, ಕಾರಂತ, ಕೊಳಂಬೆ, ಇನಾಂದಾರ್, ನಿಸಾರ್, ಇವರ ಕೃತಿಗಳನ್ನು ಕುರಿತು ಹೊಸ ಸನ್ನಿವೇಶವೊಂದನ್ನು ನಿರ್ಮಾಣ ಮಾಡುತ್ತದೆ. ಕವಿ ಮತ್ತು ಕಾವ್ಯ ಕುರಿತು ಸೂಕ್ಷ್ಮ ಅವಲೋಕನದ ಬರಹಗಳು ಸಮುಚ್ಚಯದ ಸೊಗಸನ್ನು ಹೆಚ್ಚಿಸಿವೆ. ಪದ್ಯಗದ್ಯಗಳ ಸರಸ ದಾಂಪತ್ಯದ ಸೊಗಸಿನ ಪ್ರಬಂಧದ ವಿಶಿಷ್ಟ ಶೈಲಿಯು ಈ ಕೃತಿಯಲ್ಲಿದೆ. ಈ ಸಂಕಲನದಲ್ಲಿ ಅಡಕವಾಗಿರುವ ಅಧ್ಯಾಯಗಳೆಂದರೆ: ಪಂಜೆ ಮತ್ತು ಪಡುಕೋಣೆ ಪ್ರಬಂಧ ಸಾಹಿತ್ಯ, ಗೋವಿಂದ ಪೈಯವರ ಕಾವ್ಯಲೋಕ , ಡಿ.ವಿ.ಜಿ. ವಾಹ್ಮಯ: ಧರ್ಮ, ತತ್ವ; ಬೇಂದ್ರೆ ಕಾವ್ಯದಲ್ಲಿ ಹಾಸ್ಯ , ವಿ.ಸೀ ಎರಡು ಸ್ಮತಿಚಿತ್ರಗಳು , ಕಾರಂತರ 'ಚೋಮನ ದುಡಿ'; ಇನಾಂದಾರರ ಕಾದಂಬರಿಗಳು: ಜೀವನ ದೃಷ್ಟಿ , ಕೊಳಂಬೆಯವರ ಕಾವ್ಯ; 'ಗುಣಕ್ಕೆ ಕೈ ಮುಗಿದ' ಕವಿ ನಿಸಾರ್ , ನೆಹರೂಜಿಯವರ ಬರವಣಿಗೆ ,ಮಹಾಭಾರತದಲ್ಲಿ ಪರಿಭ್ರಮಣ , ಕಾವ್ಯ ಕನ್ನಿಕೆಯ ಅಲಂಕಾರ , ದೇಸಿ ಸಾಹಿತ್ಯದಲ್ಲಿ ವಿನೋದ , ದೀಪಾವಳಿ: ಕನ್ನಡ ಕವಿಗಳ ಕಣ್ಣಲ್ಲಿ ಪಡುಕೋಣೆ ಮುಂತಾದ ಅಧ್ಯಾಯಗಳನ್ನಯ ಒಳಗೊಂಡಿದೆ.
©2025 Book Brahma Private Limited.