’ಹೊಸಗನ್ನಡ ಕಾವ್ಯ: ನಾಲ್ಕು ಶಿಖರಗಳು’ ಕೃತಿಯು ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ ಹಾಗೂ ದಲಿತ ಕವಿ ಸಿದ್ಧಲಿಂಗಯ್ಯ ಅವರ ಕಾವ್ಯದ ಕುರಿತ ಬರಹ ಕೃತಿಯಲ್ಲಿದೆ. ಕೃತಿಯ ಬಗ್ಗೆ ಲೇಖಕರು, ’ಕಳೆದ ನೂರು ವರ್ಷಗಳ ಹೊಸಗನ್ನಡ ಕಾವ್ಯವು ವೈವಿಧ್ಯಮಯವಾಗಿದ್ದು, ಈ ವೈವಿಧ್ಯತೆಗೆ ಕಾರಣ, ವಿಭಿನ್ನ ಕಾಲಘಟ್ಟಗಳ ಹಿನ್ನೆಲೆಯಲ್ಲಿ ಮೂಡಿದ ವಿವಿಧ ಸಾಹಿತ್ಯ ಪಂಥಗಳಾಗಿವೆ. ಇಲ್ಲಿ ಸಾವಿರಾರು ಕವಿಗಳು ಮೂಡಿದ್ದಾರೆ. ಅವರಲ್ಲಿ ಹತ್ತಾರು ಶಿಖರಗಳನ್ನು ಗುರುತಿಸಬಹುದಾಗಿದೆ. ಆದರೆ, ಅವರಲ್ಲಿ ಮಾರ್ಗ ನಿರ್ಮಾಪಕರೆನ್ನಿಸಿಕೊಂಡ ನಾಲ್ವರು ಕವಿಗಳನ್ನು ಸಹ ಗುರುತಿಸಬಹುದು. ನವೋದಯ ಮಾರ್ಗವನ್ನು ಶ್ರೀಮಂತವಾಗಿ ತೆರೆದ ದ.ರಾ. ಬೇಂದ್ರೆ, ಕುವೆಂಪು ಒಂದೆಡೆಗಿದ್ದಾರೆ. ನವ್ಯ ಮಾರ್ಗವನ್ನು ಶ್ರೀಮಂತವಾಗಿ ತೆರೆದ ಎಂ. ಗೋಪಾಲಕೃಷ್ಣ ಅಡಿಗರು ಇದ್ದಾರೆ. ಅಂತೆಯೇ, ದಲಿತ ಚಳವಳಿ, ಮಾರ್ಕ್ಸ್‌ವಾದಿ ಸಿದ್ಧಾಂತ, ಬಿ.ಆರ್. ಅಂಬೇಡ್ಕರ್ ಸಿದ್ಧಾಂತಗಳ ಹಿನ್ನಲೆಯಲ್ಲಿ ದಲಿತ ಕಾವ್ಯ ಮಾರ್ಗವನ್ನು ತೆರೆದ ಸಿದ್ಧಲಿಂಗಯ್ಯ ಇದ್ದಾರೆ. ಹಾಗಾಗಿ ಈ ನಾಲ್ವರು ಇಲ್ಲಿ ಹೊಸಗನ್ನಡ ಕಾವ್ಯದ ನಾಲ್ಕು ಪ್ರಮುಖ ಶಿಖರಗಳಾಗಿ ನನಗೆ ಕಂಡಿದ್ದಾರೆ. ಅದರ ನಿರ್ವಚನದ ನೆಲೆಯಲ್ಲಿ ಅವರ ಪ್ರಾತಿನಿಧಿಕ ಕಾವ್ಯವನ್ನು ಇಲ್ಲಿ ನೋಡಲು ಯತ್ನಿಸಲಾಗಿದೆ’ಎಂದಿದ್ದಾರೆ.
©2025 Book Brahma Private Limited.