ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟಾಗೋರ್ ದೊಡ್ಡ ಹೆಸರು. ಬೆಂಗಾಲಿಯಲ್ಲಿ ಕವಿತೆ-ನಾಟಕ- ಕಾದಂಬರಿ- ಕತೆ ಸೇರಿದಂತೆ ವೈವಿಧ್ಯಮಯ ಸಾಹಿತ್ಯ ಸೃಷ್ಟಿಸಿದ ಟಾಗೋರ್ ಮೇರು ಪುರುಷ. ಟಾಗೋರ್ ಕೇವಲ ಕವಿ-ಲೇಖಕನಾಗಿ ಮಾತ್ರವಲ್ಲದೆ ಸಂಗೀತ-ಲಲಿತಕಲಾ ಕ್ಷೇತ್ರದಲ್ಲಿಯೂ ಅಸಾಧಾರಣ ಸಾಧನೆ ಮಾಡಿದವರು. ಬಂಗಾಲಿಯಲ್ಲಿ ಬರೆಯುತ್ತಿದ್ದ ಟಾಗೋರ್ ಅವರ ಬರೆಹಗಳು ಇಂಗ್ಲಿಷಿಗೆ ಅನುವಾದವಾಗಿ ಜಾಗತಿಕ ಮನ್ನಣೆ ಪಡೆದದ್ದು ಇತಿಹಾಸ.
ಭಾರತೀಯ ಸಾಹಿತ್ಯ ಸಂಸ್ಕೃತಿಯ ಮೇರೆಗಳನ್ನು ವಿಸ್ತರಿಸಿ ಮತ್ತೊಂದು ಮಹಾನ್ ಚೇತನ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಕುವೆಂಪು ಅವರು ಕಾಲದ ದೃಷ್ಟಿಯಿಂದ ಟಾಗೋರ್ ನಂತರದವರಾದರೂ ಮಹತ್ವದ ದೃಷ್ಟಿಯಿಂದ ಕಡಿಮೆಯೇನಲ್ಲ. ಕುವೆಂಪು ಅವರು ಕಾವ್ಯ, ಕಾದಂಬರಿ, ವಿಮರ್ಶೆ, ನಾಟಕ ಹೀಗೆ ವೈವಿಧ್ಯಮಯ ಸಾಹಿತ್ಯ ಸೃಷ್ಟಿಯ ಜೊತೆಗೆ ಕನ್ನಡ ಸಂಸ್ಕೃತಿಗೆ ತಾತ್ವಿಕತೆಯ ಚೌಕಟ್ಟು ಕಲ್ಪಿಸಲು ಹೆಣಗಿದವರು.
ಟಾಗೋರ್ ಮತ್ತು ಕುವೆಂಪು ಇಬ್ಬರೂ ಮಹಾನ್ ಲೇಖಕರು. ಅವರಿಬ್ಬರ ಬಗ್ಗೆ ತೌಲನಿಕವಾಗಿ ವಿವರಿಸಿ ವಿಶ್ಲೇಷಿಸಿದ ಕೃತಿಯಿದು. ಹಿರಿಯ ಲೇಖಕ ಸಿ.ಪಿ.ಕೆ. ಅವರ ಪರಿಶ್ರಮ ಎದ್ದು ಕಾಣಿಸುತ್ತದೆ.
©2025 Book Brahma Private Limited.