12ನೇ ಶತಮಾನದ ಕ್ರಾಂತಿಕಾರನೊಬ್ಬನ ಚಿಂತನೆ ಹೇಗೆ 20ನೆ ಶತಮಾನದಲ್ಲಿ ಮತ್ತೆ ಮರು ಹುಟ್ಟು ಪಡೆದು ದೇಶದಲ್ಲಿ ತಳಸ್ತರದ ಜನರಲ್ಲಿ ಆತ್ಮಗೌರವವನ್ನು ಎಚ್ಚರಿಸುತ್ತದೆ ಎನ್ನುವುದನ್ನು ರಂಜಾನ್ ದರ್ಗಾ ಅವರ 'ಬಸವಣ್ಣ ಮತ್ತು ಅಂಬೇಡ್ಕರ್' ಕೃತಿ ವಿವರಿಸುತ್ತದೆ. ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯ ಮೂಲದ್ರವ್ಯದಲ್ಲಿರುವ ಸಾಮ್ಯತೆಯ ಕುರಿತಂತೆ ಗಮನ ಸೆಳೆಯುವುದಷ್ಟೇ ಅಲ್ಲದೆ, ವಚನ ಚಳವಳಿಯ ಕುರಿತಂತೆ ವಿಸ್ತ್ರತ ವಿವರಣೆ ಗಳನ್ನು ಈ ಕೃತಿ ನೀಡುತ್ತದೆ. ಪ್ರಾಚೀನ ಕಾಲದಿಂದ ಒಳಗೊಂಡು ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ದರ್ಗಾ ಅವರು ಅಂಬೇಡ್ಕರ್ ಮತ್ತು ಬಸವಣ್ಣ ಅವರ ಚಿಂತನೆಗಳ ಬೆಳಕಿನಲ್ಲಿ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸುಮಾರು 20 ಲೇಖನಗಳನ್ನು ಕೃತಿ ಒಳಗೊಂಡಿದೆ. ವರ್ತಮಾನಕ್ಕೆ ಬಸವಣ್ಣ ಹೇಗೆ ಪ್ರಸ್ತುತವಾಗುತ್ತಾರೆ, ಬಸವಣ್ಣ ಮತ್ತು ಅಂಬೇಡ್ಕರ್ ಚಿಂತನೆಯಲ್ಲಿರುವ ಸಾಮ್ಯತೆಗಳು, ಹೇಗೆ ಬಸವಧರ್ಮಕ್ಕೆ ವಿರುದ್ದವಾದ ಮೂಢನಂಬಿಕೆಗಳು ಇದೀಗ ನಮ್ಮ ಸಮಾಜವನ್ನು ಕಾಡುತ್ತಿದೆ, ಜಾತೀಯತೆಯನ್ನು ಬಸವ ಮತ್ತು ಅಂಬೇಡ್ಕರ್ ಮೂಲಕ ಹೇಗೆ ಎದುರಿಸಬಹುದು ಎನ್ನುವುದನ್ನು ಚರ್ಚಿಸುವ ಬೇರೆ ಬೇರೆ ಲೇಖನಗಳು ಈ ಕೃತಿಯಲ್ಲಿದೆ.
©2024 Book Brahma Private Limited.