ಕರ್ನಾಟಕದ ಬಸವೇಶ್ವರ ಹಾಗೂ ಮಹಾರಾಷ್ಟ್ರದ ಜ್ಞಾನೇಶ್ವರ ಸಮಕಾಲೀನರಲ್ಲ. ಆದರೂ ಅವರು ಬದುಕಿದ್ದಾಗ ಸಮಾಜದ ಪರಿವರ್ತನೆ ಅವರಿಬ್ಬರ ಗುರಿಯೂ ಆಗಿತ್ತು. ಅವರು ಪ್ರಚಾರಗೊಳಿಸಿದ ವಿಚಾರಗಳು ಅಂದಿಗೂ-ಇಂದಿಗೂ ಪ್ರಸ್ತುತವಾಗಿವೆ. ಅವರು ಜನರ ಆಡುಮಾತಿನಲ್ಲಿ ತಮ್ಮ ವಚನಗಳು ಹಾಗೂ ಆಭಂಗಗಳನ್ನು ರಚಿಸಿ ಜನಸಾಮಾನ್ಯರಿಗೆ ಸಮೀಪರಾದರು. ಕಾಗದ ಮತ್ತು ಮುದ್ರಣ ಸೌಲಭ್ಯಗಳಿಲ್ಲದಿದ್ದ ಆ ಕಾಲದಲ್ಲಿ ಅವರ ಅನುಯಾಯಿಗಳು ಆ ವಿಚಾರಗಳನ್ನು ಕಂಠಪಾಠ ಮಾಡಿ, ಮುಂದಿನ ತಲೆಮಾರಿನವರಿಗಾಗಿ ರಕ್ಷಿಸಿದರು, ತಾಳೆಯೋಲೆಯ ಗ್ರಂಥಗಳು ಬೆಂಕಿಗೆ ಆಹುತಿಯಾದರೂ ಜನರ ಎದೆಯಲ್ಲಿ ಅವು ಉಳಿದುಕೊಂಡವು. ಈ ಪುಟ್ಟ ಹೊತ್ತಿಗೆಯಲ್ಲಿ ಲೇಖಕ ಶ್ರೀಕೃಷ್ಣ ಮೆಣಸೆ ಅವರು ಬಸವೇಶ್ವರ ಮತ್ತು ಜ್ಞಾನೇಶ್ವರರ ಬದುಕಿನ ವಿಚಾರಗಳ ಒಂದು ತುಲನಾತ್ಮಕ ಅಧ್ಯಯನ ಮಾಡಿದ್ದಾರೆ. ಮರಾಠಿಯಲ್ಲಿ ಪ್ರಕಟವಾಗಿರುವ ಈ ಕೃತಿ ಪ್ರಶಸ್ತಿಗಳನ್ನು ಗಳಿಸಿದೆ. ಚಂದ್ರಕಾಂತ ಪೋಕಳೆ ಅವರು ಆ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.