ಬೇಲಿ ಮೇಲಿನ ಹೂ

Author : ದ್ವಾರನಕುಂಟೆ ಪಾತಣ್ಣ

Pages 144

₹ 120.00




Published by: ಸ್ನೇಹ ಪ್ರಕಾಶನ

Synopsys

ಗ್ರಾಮೀಣ ಬದುಕಿನ ಜೀವನವನ್ನು, ಅವರ ಸಂಕಟಗಳನ್ನು ಆಪ್ತವಾಗಿ ಹಿಡಿದಿಡುವ ಕಥಾ ಸಂಕಲನ ಇದು. ಶ್ರಮಿಕರ ಜೀವನ ಹಸನಾಗಿಸುವುದು ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. 

ಪುಸ್ತಕದ ಕುರಿತು ಒಂದೆಡೆ ಮಾತನಾಡಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ’ಕರ್ನಾಟಕದಲ್ಲಿ ನಡೆದ ಚಳವಳಿಯ ಕಥಾನಕಗಳೇ ಕೃತಿಯಲ್ಲಿವೆ ಅನ್ನಿಸುತ್ತದೆ. ಮಹಿಳೆ, ರೈತ, ಯುವಜನ, ವಿದ್ಯಾರ್ಥಿಗಳ ಬಗ್ಗೆ ಬರಹಗಳು ಬರುತ್ತಿವೆ ಎಂದರೆ ಅದಕ್ಕೆ ಚಳವಳಿಗಳೇ ಕಾರಣ. ಪ್ರಗತಿಪರ, ಚಲನಶೀಲ ನೆಲೆಯಲ್ಲಿ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಮೂಲಕ ಚಳವಳಿ ನಿರಂತರ ಎಂಬುದನ್ನು ಕೃತಿಕಾರರು ದಾಖಲಿಸಿದ್ದಾರೆ’ ಎಂದಿದ್ದಾರೆ. 

ಚಳವಳಿಗಳ ಮೂಲಕ ಜನಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸುವವರು ಓದಲೇಬೇಕಾದ ಕತೆಗಳು ಇಲ್ಲಿಯವು. 

About the Author

ದ್ವಾರನಕುಂಟೆ ಪಾತಣ್ಣ

ದ್ವಾರನಕುಂಟೆ ಪಾತಣ್ಣ ಅವರು 1951 ಮಾರ್ಚ್ 14 ರಂದು  ತುಮಕೂರು ಜಿಲ್ಲೆಯ ದ್ವಾರನಕುಂಟೆಯಲ್ಲಿ ಜನಿಸಿದರು. ಬಿ.ಎಸ್. ಸಿ, ಡಿ.ಎಂ.ಇ ಪದವೀಧರರಾದ ಇವರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ. 18 ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ಅರ್ಪಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ಧಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ  ಪ್ರಶಸ್ತಿ, ...

READ MORE

Related Books