ಲೇಖಕ ಸೃಜನ್ ಗಣೇಶ್ ಹೆಗಡೆ ಅವರ ಕೃತಿ-ಆಪ್ತ ಬಂಧನ. ಯಕ್ಷಗಾನ ಪ್ರಸಂಗವನ್ನು ವಿವರಿಸುವ ಕೃತಿ. ಜಾನಪದೀಯ ದೃಶ್ಯ ಕಲೆ ಹಾಗೂ ಸಾಹಿತ್ಯದಲ್ಲಿ ಯಕ್ಷಗಾನ ಕಲೆಯು ತನ್ನದೇ ಆದ ಮುದ್ರೆ ಒತ್ತಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಪೌರಾಣಿಕ ಆಖ್ಯಾನಗಳ ಜೊತೆಗೆ ಕಾಲ್ಪನಿಕ, ಸಾಮಾಜಿಕ ಆಖ್ಯಾನಗಳೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ 'ಆಪ್ತಬಂಧನ' ಯಕ್ಷಗಾನ ಪ್ರಸಂಗವು ಒಂದು ಸಾಮಾಜಿಕ ಮೌಲ್ಯವನ್ನು ಬಾಂಧವ್ಯದ ಸವಿಯಲ್ಲಿ ನೀಡುವ ಪ್ರಸಂಗ. ಪ್ರಸಂಗದ ಕಥೆಯಲ್ಲಿ ತಂದೆಯ ಹುಡುಕಾಟವಿದ್ದು, ಬಾಂಧವ್ಯದ ಬೆಸುಗೆ ಯಾವ ವಿಧದಲ್ಲಿರುತ್ತದೆ ಎಂಬ ದನಿಯನ್ನು ಈ ಕೃತಿ ಸಾರುತ್ತದೆ.
ಲೇಖಕರು ಸ್ವತಃ ಯಕ್ಷಗಾನ ಭಾಗವತರೇ ಆಗಿದ್ದರಿಂದ ಒಂದು ಉತ್ತಮವಾದ ಅಧ್ಯಯನದ ಮುಖೇನ ಮಟ್ಟುಗಳ ಪರಿಚಯದೊಂದಿಗೆ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.