‘ಯಾರಿಗೆ ಬೇಡ ದುಡ್ಡು’ ಈ ಕೃತಿ ಯು.ಪಿ.ಪುರಾಣಿಕ್ ಅವರ ಅಂಕಣ ಬರಹಗಳ ಸಂಗ್ರಹ. ಆರ್ಥಿಕತೆಯಲ್ಲಿ ಹಣಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಮನುಷ್ಯನ ಬಯಕೆ, ಬೇಡಿಕೆ, ಪೂರೈಕೆಗಳೆಲ್ಲವೂ ಹಣದ ಮೇಲೇ ಅವಲಂಬಿತ. ಮಾತ್ರವಲ್ಲ ಜೀವನ ನಿರ್ವಹಣೆಗೆ ಹಣ ಗಳಿಕೆ, ಅದರ ಬಳಕೆ, ಸೂಕ್ತ ಉಳಿತಾಯವೂ ಅಷ್ಟೇ ಅಗತ್ಯ. ಅದೆಷ್ಟೋ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಗಿಲೀಟು ಮಾತುಗಳಿಗೆ ಮರುಳಾಗಿ, ದುಪ್ಪಟ್ಟಾಗುವುದೆಂದು ನಂಬಿ, ತೊಡಗಿಸಿ ಕಳೆದುಕೊಂಡಿರುವ ನಿದರ್ಶನಗಳೂ ಇಲ್ಲದಿಲ್ಲ ಎನ್ನುತ್ತಾರೆ ಲೇಖಕರು. ಇಂತಹವುಗಳ ಸಮರ್ಪಕ ನಿರ್ವಹಣೆಗೆ ಕೈಪಿಡಿಯಂತಿದೆ ಯಾರಿಗೆ ಬೇಡ ದುಡ್ಡು ಪುಸ್ತಕ.
©2025 Book Brahma Private Limited.