ಅರ್ಥಹಿತ ಗ್ರಾಹಕತೆ ನಿಮ್ಮ ಜೇಬು ಭದ್ರ

Author : ವೈ.ಜಿ.ಮುರಳೀಧರನ್

Pages 96

₹ 110.00




Year of Publication: 2022
Published by: ಅಮೂಲ್ಯ ಪುಸ್ತಕ
Address: ನಂ.64, `ಆಸರೆ\' 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಜ್ಯೋತಿನಗರ, ಚಂದ್ರಾಲೇಔಟ್, ಬೆಂಗಳೂರು - 560 072
Phone: 9448676770

Synopsys

ಹಣಕ್ಕೊಂದು ಮೌಲ್ಯವಿದೆ. ಆದರ ಬಳಕೆ ಸರಿಯಾದರೆ ಹಣ ವ್ಯಯಿಸಿದವನಿಗೂ ತೃಪ್ತಿ, ದಿನೇ ದಿನೇ ಮಾರುಕಟ್ಟೆ ಬದಲಾಗುತ್ತಲೇ ಇದೆ; ಇರುತ್ತದೆ. ಹೊಸ ಹೊಸ ಉತ್ಪನ್ನಗಳು, ವಿಶೇಷ ರಿಯಾಯಿತಿ ಯೋಜನೆ, ಉಚಿತ ಕೊಡುಗೆ ಎಂದಲ್ಲ. ಗ್ರಾಹಕರನ್ನು ಆಕರ್ಷಿಸಲು- ಸಳೆಂಬು ದೊಂಬರಾಟ ನಡೆಯುತ್ತಿದೆ. ಇದಕ್ಕೆ ಮಾರುಹೋದ, ಗ್ರಾಹಕ ಯಾವುದು ಗುಣಮಟ್ಟದ್ದು, ಯಾವುದು ಕಳಪೆಯದ್ದು ಎಂದೆಲ್ಲ ತುಲನೆ ಮಾಡುತ್ತ ಕೂರುವುದು ಸ್ವಲ್ಪ ಕಷ್ಟ. ಹಾಗಾಗಿ, ತೋಚಿದ್ದನ್ನು ಕೊಳ್ಳುತ್ತಾನೆ. ಇಂಥ ಸಮಯದಲ್ಲಿ ಕೊಂಡ ವಸ್ತು ಅವನ ಅಗತ್ಯ ಪೂರೈಸಬೇಕಷ್ಟೆ' ಆದಾಗದೆ, ಕೈಕೊಟ್ಟಾಗ ಅದರಿಂದ ನಷ್ಟ ಅನುಭವಿಸುವವನು ಗ್ರಾಹಕನೇ ವೈ.ಜಿ. ಮುರಳೀಧರನ್ ಅವರ 'ಅರ್ಥಹಿತ' ಓದುಗನಿಗೆ ಉಪಯೋಗಕ್ಕೆ ಬರುವುದು ಈ ವಿಚಾರದಲ್ಲಿ ಸುಮಾರು ವರ್ಷಗಳಿಂದ ಗ್ರಾಹಕರ ಹಕ್ಕುಗಳ ಕುರಿತು ಜನರಿಗೆ ಅರಿದು ಮೂಡಿಸುವುದರೆಡೆಗೆ ಅವರ ಬರಹ- ಕಾರ್ಯಗಳು, ಹಾಗಾಗಿ, 'ಆರ್ಥಹಿತ'ದಲ್ಲೂ, ಗ್ರಾಹಕರ ಹಿತದೃಷ್ಟಿ ಇದೆ. ಶ್ರೀಸಾಮಾನ್ಯ ಯಾವೆಲ್ಲ ವಿಚಾರಕ್ಕೆ ಮಾರುಕಟ್ಟೆಯಲ್ಲಿ, ತನ್ನ ದಿನನಿತ್ಯ ಬಳಸುವ ವಸ್ತುಗಳಲ್ಲಿ, ಇನ್ನಿತರ ವಿಚಾರಗಳಲ್ಲಿ ದೋಸ ಹೋಗುತ್ತಾನೆ. ಆದರಿಂದ ಪಾರಾಗಲು ಮಾರ್ಗಗಳೇನೂ ಇಲ್ಲವೇ ಅಂದುಕೊಳ್ಳುವ ಗ್ರಾಹಕನಿಗೆ ತಮಗಾಗೇ ಇರುವ ಗ್ರಾಹಕ ಕಾಯ್ದೆಯ ವಿಚಾರಗಳನ್ನು ಸಣ್ಣ ಸಣ್ಣ ಪ್ರಕರಣಗಳನ್ನು ಉದಹರಿಸುತ್ತ ಅದಕ್ಕೆ ಪರಿಹಾರವನ್ನೂ ತಿಳಿಸುತ್ತ ಎಚ್ಚರಿಸುವುದು 'ಅರ್ಥಹಿತ'ದ ಗುಣ. ಹಾಗಾಗಿ, ಅರ್ಥ ವಾಸ್ತ್ರ, ಕಾಯ್ದೆ-ಕಾನೂನು ಅರಿಯದವರೂ, ಅರ್ಥದ ಹಿತವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದನ್ನು ಅರ್ಥವಾಗುವಂತೆ, ಹಿತವಾಗುವಂತೆ, ಇಂದಿನ ದಿನಕ್ಕೆ ಪ್ರಸ್ತುತ ಎನಿಸುವಂತೆ ವಿವರಿಸಿರುವುದು ಅರ್ಥಹಿತರ ವಿಶೇಷ ಎಂದು ವೈ.ಜಿ. ಮುರಳೀಧರನ್‌ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Related Books