‘ಸಾಲದಲ್ಲಿ ಸೋಲದಿರಿ’ ಸಾಲವನ್ನು ಉಪಯೋಗಿಸಿ, ನಿಯಂತ್ರಿಸಿ, ನಿರ್ವಹಿಸಿ' - ಈ ಕೃತಿ ಕುರಿತು ಆರ್ಥಿಕ ಮತ್ತು ಹೂಡಿಕೆ ತಜ್ಞ ಜಯದೇವ ಪ್ರಸಾದ್ ಮೊಳೆಯಾರ ಬರೆದಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು, ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ- ಈ ಪುಸ್ತಕದ ಜೀವಾಳ. ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ-ಎಳೆಯಾಗಿ ಪ್ರಾಯೋಗಿಕ ಟಿಪ್ಸ್ ಗಳ ಜೊತೆಗೆ ‘ಸಾಲದಲ್ಲಿ ಸೋಲದಿರಿ’ ಪುಸ್ತಕದಲ್ಲಿ ನೀಡಲಾಗಿದೆ.
©2024 Book Brahma Private Limited.