ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 8ರ ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತ ಸಾವಿರ ಮತ್ತು ಐದು ನೂರು ರೂಪಾಯಿ ನೋಟುಗಳ ಬಳಕೆ ನಿಷೇಧಿಸುವ ಘೋಷಣೆ ಮಾಡಿದರು. ನೋಟ್ ಬಂದಿಯಿಂದ ನೂರಾರು ಜನ ಜೀವ ಕಳೆದುಕೊಂಡರೆ ಸಾವಿರಾರು ಜನ ಸಂಕಷ್ಟಕ್ಕೆ ಒಳಗಾದರು. ಲಕ್ಷಾಂತರ ಜನ ನೌಕರಿ ಕಳೆದುಕೊಂಡರು ಹಾಗೆಯೇ ಉದ್ಯಮಗಳು ಮುಚ್ಚಿದವು. ಅಸಂಘಟಿತ ವಲಯ ನೆಲೆ ಕಳೆದುಕೊಂಡರೆ ಸಣ್ಣ ಉದ್ಯಮಗಳು ತಲೆ ಎತ್ತದಂತಾದವು. ನೋಟು ರದ್ದತಿಯನ್ನು ಕೇಂದ್ರವಾಗಿಟ್ಟು ನವ ಉದಾರವಾದಿ ನೀತಿ ಹೇಗೆ ಭಾರತವನ್ನು ನಿಯಂತ್ರಿಸುತ್ತದೆ ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.