ಜಾನಪದದ ಬದಕಿನಲ್ಲಿ ಜಾತ್ರೆಯು ಆಸಕ್ತಿ ಹುಟ್ಟಿಸೂದರೊಂದಿಗೆ , ಜಾತ್ರೆಯು ಜಾನಪದರ ಜೀವನದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ,ಇದರ ಮಹತ್ವ ಏನು? ಎಂಬ ಹಲವು ವಿಷಯಗಳನ್ನು’ಡಾ. ಯಣ್ಣೆಕಟ್ಟೆ ಚಿಕ್ಕಣ್ಣ’ ರವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ತುಮಕೂರು ಜಿಲ್ಲೆಯ ತಾಲೂಕುಗಳನ್ನು ಆಧಾರವಾಗಿಟ್ಟುಕೊಂಡು , ಅಲ್ಲಿನ ಪ್ರತಿಯೊಂದು ತಾಲೂಕಿಗೂ ಭೇಟಿಕೊಟ್ಟು ಅಲ್ಲಿ ನಡೆಯುವ ಜಾತ್ರೆಯ ಬಗ್ಗೆ ವಿವರವನ್ನು ಪಡೆದುಕೊಂಡು ಈ ಕೃತಿಯನ್ನು ರಚಿಸಿದ್ದಾರೆ. ಅಲ್ಲಿಯ ಭೌಗೋಳಿಕ ಪರಿಸ್ಥಿತಿ, ಪ್ರಧಾನ ದೇವತೆಗಳ ಬಗ್ಗೆ, ಗುಡಿ,ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಘನತೆಯನ್ನು ಸಾರುತ್ತದೆ. ಜಾತ್ರೆಯ ಮಹತ್ವ,ಅದರ ಹಿನ್ನೆಲೆ ಬಗ್ಗೆ ವಿವರಗಳನ್ನು ಲೇಖಕರು ಒದಗಿಸಿದ್ದಾರೆ.
©2024 Book Brahma Private Limited.