ಭಾರತೀಯ ಧಾರ್ಮಿಕ ಪರಂಪಂರೆಯಲ್ಲಿ ಕಾಳಾಮುಖ ಮತ್ತು ಪಾಶುಪತ ಪಂಥಗಳು ಶಿಲ್ಪಶಾಸ್ತ್ರದಲ್ಲಿಯೂ ತಮ್ಮ ಅನನ್ಯತೆಯನ್ನು ಮೆರೆದಿವೆ. ಡಾ.ವಸುಂಧರಾ ಫಿಲಿಯೋಜಾ ಅವರು ಈ ವಿಶಿಷ್ಟವಾದ ಕ್ಷೇತ್ರದಲ್ಲಿ ಆಳವಾಗಿ ಆಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಹನುಮಾಕ್ಷಿ ಗೋಗಿ ಯು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಲೇಖಕೆರು ಧಾರವಾಡ ಜಿಲ್ಲೆಯಲ್ಲಿನ ಕಾಳಾಮುಖ ಮತ್ತು ಪಾಶುಪತಗಳ ದೇವಾಲಯಗಳ ಸ್ವರೂಪ ಮತ್ತು ವೈಶಿಷ್ಟ್ಯವನ್ನು ವಿವರವಾಗಿ ತಿಳಿಸಿದ್ದಾರೆ. ಈ ದೇವಾಲಯಗಳು ನಿರ್ಮಿತವಾದ ಕಾಲದಲ್ಲಿನ ರಾಜಕೀಯ, ಸಾಮಾಜಿಕ ವಾತಾವರಣವನ್ನೂ ಕೂಡ ಈ ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.