1956ರಲ್ಲಿ ರಾಜ್ಯ ಏಕೀಕರಣಗೊಂಡ ನಂತರ ಕರ್ನಾಟಕ ಸರ್ಕಾರ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 2003ರಲ್ಲಿ ಅವರ ಕವನ ‘ಜಯ ಭಾರತ ಜನನಿಯ ತನುಜಾತೆ’ಯನ್ನು ‘ನಾಡಗೀತೆ’ ಎಂದು ಘೋಷಿಸಲಾಯಿತು. ಕುವೆಂಪು ವಿರಚಿತ ನಾಡಗೀತೆಯಲ್ಲಿ ಬರುವ ಅನೇಕ ವ್ಯಕ್ತಿ, ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲದೆ ಇದ್ದದ್ದು ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತು ಮತ್ತು ದೊಡ್ಡ ಕೊರತೆಯಾಗಿತ್ತು. ನಾಡಗೀತೆಯನ್ನು ಮೆಚ್ಚುವ ಇಲ್ಲಿನ ಅನೇಕ ಜನರಿಗೆ ಇಲ್ಲಿ ಬರುವ ಋಷಿಗಳು, ರಾಜರುಗಳ ಬಗ್ಗೆ ಇಲ್ಲಿಯ ಜನರಿಗೆ ಸಮಗ್ರ ತಿಳುವಳಿಕೆಯ ಕೊರತೆ ಇದೆ ಎಂಬುದನ್ನು ಮನಗಂಡ ಹಿರಿಯ ಸಂಶೋಧಕ “ಎಂ.ಚಿದಾನಂದ ಮೂರ್ತಿ”ಯವರು ಅವುಗಳನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.
©2024 Book Brahma Private Limited.