ಚಾಣಕ್ಯ ಭಾರತ ಕಂಡ ಅಪ್ರತಿಮ ನೀತಿಜ್ಞ ದಾರ್ಶನಿಕ. ಅರ್ಥ ಶಾಸ್ತ್ರವಾಗಲಿ, ರಾಜ್ಯ ಶಾಸ್ತ್ರವಾಗಲಿ ಎಲ್ಲದರಲ್ಲೂ ಚಾಣಕ್ಯನ ನೀತಿಗಳು ಪ್ರಮುಖ ಸ್ಥಾನವನ್ನು ಪಡೆದಿವೆ. ಈಗಲೂ ಕೂಡ ಚಾಣಕ್ಯನಂತೆ ಅವನು ಬರೆದಿಟ್ಟ ನೀತಿ ಶಾಸ್ತ್ರದ ಅಂಶಗಳು ಕೂಡ ಬಹು ಚರ್ಚಿತ ವಿಷಯಗಳು. ಇವತ್ತಿಗೂ ರಾಜಕಾರಣದಲ್ಲಿ ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಗಹನವಾದ ಆಲೋಚನೆ ನಡೆಸಿ ಸಮಗ್ರ ಕಾರ್ಯ ತಂತ್ರ ನಡೆಸಿ ವಿಜಯಿಯಾಗುವ ವ್ಯಕ್ತಿಗಳನ್ನು ಚಾಣಕ್ಯ ಎಂದು ಕರೆಯುತ್ತಾರೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಈಗಾಗಲೇ ಹಲವು ಪುಸ್ತಕಗಳು ಕನ್ನಡಲ್ಲಿ ಹಾಗೂ ಇತರ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಅಂತಹುದೇ ಸಾಲಿನಲ್ಲಿ ಕಾಣ ಸಿಗುವ ಇನ್ನೊಂದು ಪುಸ್ತಕ ಚಾಣಕ್ಯನ ನೀತಿ ಸೂತ್ರಗಳು – ಇಂದಿನ ಪ್ರಸ್ತುತತೆ. ಇಂದಿಗೂ ಚಾಣಕ್ಯ ನಮ್ಮ ಬದುಕಿನ ಒಂದು ಭಾಗವಾಗಿಯೇ ಮಾರ್ಪಾಡಾಗಿದ್ದಾನೆ. ಪಟ್ಟದ ಮಂತ್ರಿಯಾಗುವ ಅವಕಾಶವಿದ್ದರೂ, ಅದನ್ನು ನಿರಾಕರಿಸಿ ಅಧ್ಯಾಪಕನಾಗಿಯೇ ಜೀವನ ಕಳೆದ ಚಾಣಕ್ಯನ ಜೀವನವೇ ಒಂದು ದಂತ ಕಥೆ. ಅಂತಹ ವ್ಯಕ್ತಿಯ ಕುರಿತಾದ ಮತ್ತು ಅವನು ಬರೆದಂತಹ ನೀತಿಶಾಸ್ತ್ರದ ಬೋಧನೆಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವುದು ಕಷ್ಟದ ಮಾತು. ಅಂತಹ ಒಂದು ಸವಾಲನ್ನು ಲೇಖಕರು ಈ ಪುಸ್ತಕದಲ್ಲಿ ಮೆಟ್ಟಿ ನಿಂತಿದ್ದಾರೆ.
©2025 Book Brahma Private Limited.