‘ಸಸ್ಯ ಪ್ರಪಂಚ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಸಸ್ಯ ಪ್ರಪಂಚ ಕುರಿತ ಲೇಖನಗಳ ಸಂಕಲನವಾಗಿದೆ. ಒಟ್ಟು, 8 ಅಧ್ಯಾಯಗಳನ್ನು ಒಳಗೊಂಡಿದೆ. ಈ ಕೃತಿಯು ನಮ್ಮ ವನಸಿರಿ, ಸಸ್ಯ ಗಡಿಯಾರ, ಸಸ್ಯಲೋಕದ ಕುಬ್ಜರು, ಗಿಡ ಮರ ಕೋಟ್ಯಂತರ ವರ್ಷಗಳ ಹಿಂದೆ, ಪರ್ಣಲೋಕದಲ್ಲಿ ಪರ್ಯಟನೆ, ಮುಳ್ಳಿನ ಮಹಾತ್ಮೆ, ರೂಪಾಂತರ ಹೊಂದಿದ ಪರ್ಣ- ಹೂವು, ಅರಣ್ಯ ರೋದನ ಇವೆಲ್ಲವನ್ನು ಒಳಗೊಂಡಿದೆ.
ಕೃತಿಯ ಹಿನ್ನೆಲೆಯಾಗಿ ಕೆಲವೊಂದು ವಿಚಾರಗಳು ಹೀಗಿವೆ: ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣೀಭೂತಗಳಾದ ಪ್ರಕೃತಿ ಮಾತೆಯು, ತಾನೇ ಸೃಷ್ಟಿಸಿ, ಪೋಷಿಸಿ ಕೊನೆ' 'ಲಯ'ದ ಕಾಲದಲ್ಲೂ ತನ್ನ ಒಡಲಲ್ಲಿ ಕಾಯ್ದಿರಿಸಿದ ಚಮತ್ಕಾರಗಳು ಅಸಂಖ್ಯವಾಗಿವೆ. ವಿಜ್ಞಾನಿಗಳು ಅಪಾರ ಪರಿಶ್ರಮದಿಂದ ಬೆಳಕಿಗೆ ತಂದ ಇಂಥ ಒಡಲಾಳದ ಅದ್ಭುತ ಶೋಧಗಳಿಗೆ ಸಸ್ಯಲೋಕವು ಹೊರತಾಗಿಲ್ಲ. ಇದಕ್ಕೆ ಇಲ್ಲಿಯ 'ಗಿಡ-ಮರ, ಕೋಟ್ಯಂತರ ವರ್ಷಗಳ ಹಿಂದೆ' ಪ್ರಬಂಧವು ಒಂದು ಮಾದರಿಯಾಗಿದೆ. ಜೀವಿ-ವಿಜ್ಞಾನಿಯಾಗಿ, ಪ್ರಯೋಗಶಾಲೆಯಲ್ಲಿ ಗಂಟೆಗಟ್ಟಿಲೇ ಶ್ರಮಿಸುವ ಆಸಕ್ತಿಯೊಂದಿಗೆ ಕಾಮತರಿಗೆ ವಿಶಾಲವಾದ ಸೃಷ್ಟಿಯ ದೈನಂದಿನ ವ್ಯಾಪಾರಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವದು ಒಂದು ಹಾಬಿ ಆಗಿತ್ತು. ಪರಿಸರದಲ್ಲಿ ಪ್ರೀತಿಯುಳ್ಳ ಪ್ರತಿಯೊಬ್ಬರೂ ಸಹನೆಯಿಂದ ಕರೆದು ನೋಡಿದಾಗ, ನಿಸರ್ಗದ ಎಣೆಯಿಲ್ಲದ ಚಮತ್ಕಾರಗಳಲ್ಲಿ ಕೆಲವನ್ನಾದರೂ ಸ್ವತಃ ಕಂಡುಕೊಳ್ಳಬಹುದು ಎಂದು ಅವರು ಆಗಾಗ ಹೇಳುತ್ತಿದ್ದರು. ಕಾಮತರು ಈ ಎಲ್ಲ ಲೇಖನಗಳನ್ನು ವಿನಂತಿಯ ಪ್ರಕಾರ ಬರೆದವುಗಳೇ! ಗಡಿಯಾರ' 'ಸಸ್ಯಲೋಕದ ಕುರುಹು - ಕೋಟ್ಯಂತರ ವರ್ಷಗಳ ಹಿಂದಿನ ವ್ಯಕ್ತಿಗಳ ಕುರಿತ ಅಪರೂಪದ ಲೇಖನಗಳು ರೂಪ ತಾಳಿದವು ಎಂದಿದ್ದಾರೆ.
©2024 Book Brahma Private Limited.