ಲೇಖಕಿ ಎನ್.ಎಸ್. ಲೀಲಾ ಅವರ ಕೃತಿ ʻಸೀಮಾತೀತ ಸಸ್ಯ ಜಗತ್ತುʼ. ಲಕ್ಷಾಂತರ ಸಸ್ಯ ವೈವಿಧ್ಯಗಳನ್ನು ಸೃಷ್ಟಿಸಿ ನಾನಾ ವಿಧದ ಜೀವಿಗಳಿಗೆ ತಾಣವಾದ ಪ್ರಕೃತಿ ಹಾಗೂ ಸಸ್ಯಸಂಕುಲಗಳ ಜಗತ್ತಿನ ಬಗೆಗಿನ ಕುತೂಹಲ ವಿಚಾರಗಳನ್ನು ಪ್ರಸ್ತುತ ಪುಸ್ತಕ ಚರ್ಚಿಸುತ್ತದೆ. ಸಸ್ಯ ಸಂಪತ್ತನ್ನೇ ನಮ್ಮ ಆಹಾರ-ವ್ಯವಹಾರಗಳಾಗಿ ಮಾಡಿ, ಹಸಿರೇ ಉಸಿರು ಎಂದು ಬದುಕುತ್ತಿರುವ ನಾವು ಪ್ರಕೃತಿಯ ಬಗ್ಗೆ ತಿಳಿಯಬೇಕಾದ, ಚಿಂತಸ ಬೇಕಾದ ಹಲವಾರು ನಿಗೂಢ ಮಾಹಿತಿಗಳನ್ನು ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ವೊಲ್ಲೇಮಿ ಪೈನ್: ಸಸ್ಯ ಜಗತ್ತಿನ ಜೀವಂತ ಡೈನೋಸಾರ್, ಅತ್ತಿ-ಅರಳಿ-ಆಲದಿಂದ ಅಂಜೂರದವರೆಗೆ, ದೈತ್ಯ ಪುಷ್ಪ: ಬುಂಗ ಪದ್ಮ, ಚಿತ್ತಾಕರ್ಷಕ ಟ್ಯುಲಿಪ್‌ಗಳು, ಅಣಬೆಯ ನಾಡಿನಲ್ಲಿ ಏನೆಲ್ಲ ಬೆಡಗು-ವಿನ್ನಾಣ, ಕಲ್ಲರಳಿ ಹೂವಾಯ್ತು: ಲೈಕನ್ ಹೇಳಿದ ಕತೆ, ಮಾಂಸಾಹಾರಿ ಸಸ್ಯಗಳು, ಕುಂಚಬ್ರಹ್ಮನ ಪರಿಯೆಷ್ಟು?, ತಳಿ-ತಂತ್ರಜ್ಞಾನ: ಕಲ್ಲಂಗಡಿಗಾದ ಕಾಯಕಲ್ಪ, ತನು-ಮನ ತಣಿಸುವ ಜಂಬೀರ ಫಲಗಳು ಸೇರಿ 24 ಶೀರ್ಷಿಕೆಗಳ ಲೇಖನಗಳಿವೆ.
©2024 Book Brahma Private Limited.