ಸಸ್ಯ ಜೀವನ ವಿಜ್ಞಾನಕ್ಕೆ ಸಂಬಂಧಿಸಿದ ‘ಸುರಪಾಲನ ವೃಕ್ಷಾಯುರ್ವೇದ’ ಮೂಲ ಕೃತಿಯನ್ನು ನಳಿನಿ ಸಾಧಲೆ ಅವರು ಇಂಗ್ಲಿಷ್ ಗೆ ಭಾಷಾಂತರಿಸಿದ್ದನ್ನು ಲೇಖಕ ಆರ್.ಪಿ. ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ. ಸಸ್ಯ ಜೀವನ ಕುರಿತು ಆಳ ಜ್ಞಾನ ನೀಡುವ ಈ ಕೃತಿಯು ಪ್ರಾಚೀನ ಕಾಲದಲ್ಲಿಯೂ ಸಸ್ಯ ವಿಜ್ಞಾನ ಕುರಿತ ಗಂಭೀರ ಅಧ್ಯಯನದ ಸಂಕೇತವಾಗಿ ಧ್ವನಿಸುತ್ತದೆ. ಸಸಿ ನಾಟಿ, ಬೀಜ ಬಿತ್ತನೆ ಇತ್ಯಾದಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವೈಜ್ಞಾನಿಕ ಶಿಸ್ತನ್ನು ಕಾಣಬಹುದು. ಜೊತೆಗೆ, ಸುರಪಾಲನ ಕುರಿತ ಜೀವನ ಚಿತ್ರವನ್ನೂ, ಸಸ್ಯ ಶಾಸ್ತ್ರದ ಆಸಕ್ತಿ ಕುರಿತು ಮಾಹಿತಿಯನ್ನೂ ಈ ಕೃತಿ ಒಳಗೊಂಡಿದೆ.
©2025 Book Brahma Private Limited.