ಲೇಖಕ ಡಾ. ನಾಗೇಶ ಎಂ ಅವರು ಬಳ್ಳಾರಿ ಜಿಲ್ಲೆಯ ಕೋಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದವರು. ಸ್ವ ಗ್ರಾಮದಲ್ಲಿ ಪ್ರೌಢಶಾಲೆ ಶಿಕ್ಷಣ ಹಾಗೂ ಪಿಯುಸಿ, ಪದವಿಯನ್ನು ಖಾನ ಹೊಸಹಳ್ಳಿಯಲ್ಲಿ , ಹಾಗೂ ಕೂಡ್ಲಿಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಹಂಪಿಯ ಕನ್ನಡ ವಿ.ವಿ.ಯಲ್ಲಿ 'ಹಕ್ಕಿ-ಪಿಕ್ಕಿ ಸಮುದಾಯದ ಸಾಮಾಜಿಕ ಬದಲಾವಣೆ' ಎಂಬ ವಿಷಯವಾಗಿ ಎಂ.ಫಿಲ್ ಹಾಗೂ 'ಕಂಪಳದೇವರ ಹಟ್ಟಿಯ ಜ್ಞಾನ ಪರಂಪರೆ' ವಿಷಯವಾಗಿ ಪಿಎಚ್ ಡಿ ಪಡೆದರು.
'ಮ್ಯಾಸನಾಯಕ ಬುಡಕಟ್ಟಿನ ಅಚರಣೆಗಳು' ಇವರ ಮೊದಲ ಕೃತಿ. ಆನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ.